ಬೆಂಗಳೂರು ಜು.18 : ಬೆಂಗಳೂರಿನಲ್ಲಿ ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಕನಿಷ್ಠ 15 ಖಾಸಗಿ ಶಾಲೆಗಳಿಗೆ ಇಮೇಲ್ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಮೇಲ್ ಸಂದೇಶಗಳನ್ನು ಪರಿಶೀಲಿಸಿದರು. ವ್ಯಾಪಕ ಶೋಧದ ನಂತರ ಈ ಬೆದರಿಕೆಗಳಲ್ಲಿ ಕೆಲವು ಸಂದೇಶಗಳನ್ನು ವಂಚನೆ ಎಂದು ಘೋಷಿಸಲಾಯಿತು.

ಭೆದರಿಕೆ ಸಂದೇಶಗಳನ್ನು“roadkill333@atomicmail.io” ಐಡಿಯಿಂದ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ. ಇಮೇಲ್‌ನಲ್ಲಿ “ನಮಸ್ಕಾರ. ನಾನು ಶಾಲಾ ತರಗತಿಗಳಲ್ಲಿ ಹಲವಾರು ಸ್ಫೋಟಕ ಸಾಧನಗಳನ್ನು ಇರಿಸಿದ್ದೇನೆ. ಸ್ಫೋಟಕಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಕೌಶಲ್ಯದ ಸ್ಪೋಟಕಗಳನ್ನು ಇರಿಸಿದ್ದೇನೆ ” ಎಂದು ಬರೆದುಕೊಂಡಿದೆ.