Gram One :  ಗ್ರಾಮೀಣ ಯುವಕರಿಗೆ ದೊಡ್ಡ ಅವಕಾಶ – ಸಂಪೂರ್ಣ ಮಾಹಿತಿ !

ಬೆಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೇವೆಗಳು ಸುಲಭವಾಗಿ ತಲುಪುವಂತೆ ಮಾಡಲು ಕರ್ನಾಟಕ ಸರ್ಕಾರ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾದ ‘ಗ್ರಾಮ ಒನ್’ (Gram One) ಕೇಂದ್ರ ಯೋಜನೆ ಈಗ ಮತ್ತೆ ಚರ್ಚೆಯಲ್ಲಿದೆ.

ಈ ಯೋಜನೆಯ ಮೂಲಕ ಗ್ರಾಮ ಮಟ್ಟದಲ್ಲಿಯೇ ನಾಗರಿಕರಿಗೆ ಸರ್ಕಾರದ ವಿವಿಧ ಸೇವೆಗಳು ಒದಗಿಸಲಾಗುತ್ತಿದ್ದು, ಅದೇ ಸಮಯದಲ್ಲಿ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶ ಕೂಡ ಸಿಗುತ್ತಿದೆ.

ಹಳ್ಳಿಗಳಲ್ಲಿಯೇ ಉದ್ಯೋಗವಿಲ್ಲದೆ ಇರುವ ಯುವಕರು ಈಗ ಈ ಯೋಜನೆಯ ಮೂಲಕ ಗ್ರಾಮ ಒನ್ ಕೇಂದ್ರವನ್ನು ಆರಂಭಿಸಿ ಗೌರವಾನ್ವಿತ ಆದಾಯ ಗಳಿಸುವ ಅವಕಾಶ ಪಡೆಯಬಹುದು.

ಈ ಕೇಂದ್ರವನ್ನು ಆರಂಭಿಸಲು ಅಗತ್ಯವಿರುವ ಅರ್ಹತೆಗಳು, ಬೇಕಾಗುವ ದಾಖಲೆಗಳು, ಹೂಡಿಕೆ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಗ್ರಾಮ ಒನ್ ಕೇಂದ್ರ ಅಂದರೆ.

ಗ್ರಾಮ ಒನ್ (Gram One) ಕೇಂದ್ರವು ಕರ್ನಾಟಕ ಸರ್ಕಾರ ಆರಂಭಿಸಿದ ಒಂದು ಮಹತ್ವದ ಸೇವಾ ಕೇಂದ್ರವಾಗಿದೆ. ಈ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿಯೇ ನಾಗರಿಕರಿಗೆ ಹಲವು ಸೇವೆಗಳು ಒದಗಿಸಲಾಗುತ್ತವೆ.

ಮುಖ್ಯ  ಸೇವೆಗಳು :

  • ಸರ್ಕಾರದ ನಾಗರಿಕ ಸೇವೆಗಳು

  • ಪ್ರಮಾಣಪತ್ರ ಸೇವೆಗಳು

  • ಬ್ಯಾಂಕಿಂಗ್ ಸೇವೆಗಳು

  • ಪಾವತಿ ಸೇವೆಗಳು

  • ವಿವಿಧ ಸರ್ಕಾರಿ ಯೋಜನೆಗಳ ಅರ್ಜಿ

ಈ ಕೇಂದ್ರಗಳ ಮೂಲಕ ಗ್ರಾಮೀಣ ಜನರು ತಾಲೂಕು ಅಥವಾ ನಗರಕ್ಕೆ ಹೋಗದೆ ತಮ್ಮ ಗ್ರಾಮದೊಳಗೇ ಎಲ್ಲಾ ಸೇವೆಗಳನ್ನು ಪಡೆಯಬಹುದು.

ಇದು ಸರ್ಕಾರದ ಡಿಜಿಟಲ್ ಸೇವೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಪ್ರಮುಖ ಯೋಜನೆ ಆಗಿದೆ.


 ಗ್ರಾಮ ಒನ್ ಕೇಂದ್ರ ಪ್ರಯೋಜನಗಳು :

ಗ್ರಾಮ ಒನ್ ಕೇಂದ್ರವು ಕೇವಲ ಸೇವಾ ಕೇಂದ್ರವಷ್ಟೇ ಅಲ್ಲ. ಇದು ಯುವಕರಿಗೆ ಉತ್ತಮ ಆದಾಯದ ಮಾರ್ಗವೂ ಆಗಿದೆ. ನಿರೋದ್ಯಗದ ಸಮಸ್ಯೆ ಎದುರಿಸುತ್ತಿರುವ ಹಾಗೂ ಸ್ವಾವಲಂಬಿ ಜೀವನ ನಡೆಸಲು ಮುಂದಾದ ಯುವಕರಿಗೆ ಈ ಯೋಜನೆ ದಾರಿ ದೀಪವಾಗಲಿದೆ.

 ಮುಖ್ಯ ಪ್ರಯೋಜನಗಳು:

  • ಗ್ರಾಮದಲ್ಲಿಯೇ ಸ್ವಂತ ಉದ್ಯೋಗ

  • ಸ್ಥಿರ ಆದಾಯದ ಅವಕಾಶ

  • ಸರ್ಕಾರದ ಅಧಿಕೃತ ಸೇವಾ ಕೇಂದ್ರ

  • ಗ್ರಾಮೀಣ ಜನರಿಗೆ ಸೇವೆ ನೀಡುವ ಅವಕಾಶ

  • ಡಿಜಿಟಲ್ ಸೇವೆಗಳಲ್ಲಿ ಅನುಭವ

ಇದರ ಮೂಲಕ ಯುವಕರು ತಮ್ಮ ಗ್ರಾಮದಲ್ಲಿಯೇ ಗೌರವಾನ್ವಿತ ಉದ್ಯಮಿಯಾಗಬಹುದು.


ಮುಖ್ಯ ಮಾಹಿತಿ 

ವಿವರ ಮಾಹಿತಿ
ಅರ್ಜಿ ಶುಲ್ಕ ₹100
ಭದ್ರತಾ ಠೇವಣಿ ₹5,000
ಹೂಡಿಕೆ ₹1 ಲಕ್ಷ – ₹2 ಲಕ್ಷ
ಅರ್ಜಿ ವಿಧಾನ ಆನ್ ಲೈನ್
ಅಧಿಕೃತ ವೆಬ್‌ಸೈಟ್ karnatakaone.gov.in

 

ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು

ಗ್ರಾಮ ಒನ್ ಫ್ರಾಂಚೈಸಿ ಪಡೆಯಲು ಆಸಕ್ತರು ಕೆಲವು ಕನಿಷ್ಠ ಅರ್ಹತೆಗಳನ್ನು ಹೊಂದಿರಬೇಕು.

1. ವಿದ್ಯಾರ್ಹತೆ

ಅಭ್ಯರ್ಥಿಯು ಕನಿಷ್ಠ 2nd PUC ಪಾಸಾಗಿರಬೇಕು. ಆದರೆ ಕೆಳಗಿನ ವಿದ್ಯಾರ್ಹತೆ ಹೊಂದಿದವರಿಗೆ ಆದ್ಯತೆ ಸಿಗಬಹುದು:

  • ಡಿಪ್ಲೊಮಾ ಅಥವಾ ITI

  • ಪದವಿ ಶಿಕ್ಷಣ

  • ಸ್ನಾತಕೋತ್ತರ ಪದವಿ

2. ಕಂಪ್ಯೂಟರ್ ಜ್ಞಾನ

ಗ್ರಾಮ ಒನ್ ಕೇಂದ್ರದಲ್ಲಿ ಹೆಚ್ಚಿನ ಸೇವೆಗಳು ಆನ್ ಲೈನ್ ಮೂಲಕ ನಡೆಯುತ್ತವೆ. ಆದ್ದರಿಂದ ಅಭ್ಯರ್ಥಿಗೆ ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಇರಬೇಕು.

3. ಕರ್ನಾಟಕದ ನಿವಾಸಿ

ಅರ್ಜಿದಾರರು ರ್ನಾಟಕದ ಕಾಯಂ ನಿವಾಸಿಯಾಗಿರಬೇಕು. ಮತ್ತು ಅವರು ಅರ್ಜಿ ಸಲ್ಲಿಸುವ ಗ್ರಾಮ ಅಥವಾ ಪ್ರದೇಶದ ಬಗ್ಗೆ ಪರಿಚಯ ಹೊಂದಿರಬೇಕು.

4. ಹೂಡಿಕೆ ಸಾಮರ್ಥ್ಯ

ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಸುಮಾರು ₹1 ಲಕ್ಷದಿಂದ ₹2 ಲಕ್ಷದವರೆಗೆ ಹೂಡಿಕೆ ಅಗತ್ಯವಾಗಬಹುದು.


ಗ್ರಾಮ ಒನ್ ಅರ್ಜಿ ಸಲ್ಲಿಸುವ ವಿಧಾನ :

ಗ್ರಾಮ ಒನ್ ಕೇಂದ್ರಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆಯುತ್ತದೆ.

  •  ಅಧಿಕೃತ ವೆಬ್‌ಸೈಟ್‌ಗೆ ಭೇಟಿ

karnatakaone.gov.in
  •  ನೋಂದಣಿ

ಮುಖಪುಟದಲ್ಲಿ ಇರುವ Register Now ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ. ಮೊಬೈಲ್ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

 ಅರ್ಜಿ ಫಾರ್ಮ್ ಭರ್ತಿ

. ವೈಯಕ್ತಿಕ ಮಾಹಿತಿ ,ವಿಳಾಸ, ಶಿಕ್ಷಣ ವಿವರಗಳು ಅರ್ಜಿಯಲ್ಲಿ  ಭರ್ತಿ ಮಾಡಬೇಕು.

ದಾಖಲೆ ಅಪ್‌ಲೋಡ್

  • ಆಧಾರ್

  • ಪ್ಯಾನ್

  • ಫೋಟೋ

  • ಅಂಕಪಟ್ಟಿ

ಇವುಗಳನ್ನು ಅಪ್‌ಲೋಡ್ ಮಾಡಬೇಕು.


 ಅರ್ಜಿ ಶುಲ್ಕ ಪಾವತಿ

ಪಾವತಿ ಶುಲ್ಕ ₹100 ಶುಲ್ಕ ಪಾವತಿಸಬೇಕು .ಇದು Non-Refundable ಆಗಿರುತ್ತದೆ.

ಭದ್ರತಾ ಠೇವಣಿ

ನಿಮ್ಮ ಅರ್ಜಿ ಆಯ್ಕೆಯಾದ ನಂತರ ಮಾತ್ರ ₹5,000 ಭದ್ರತಾ ಠೇವಣಿ ಪಾವತಿಸಬೇಕು. ಈ ಠೇವಣಿ Refundable Deposit ಆಗಿರುತ್ತದೆ.


ಮುಖ್ಯ ದಾಖಲೆಗಳು :

 ಗ್ರಾಮ ಒನ್ ಅರ್ಜಿ ಸಲ್ಲಿಸುವಾಗ ಪ್ರಮುಖವಾಗಿ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರಬೇಕು.

ಗುರುತಿನ ದಾಖಲೆಗಳು

  • ಆಧಾರ್ ಕಾರ್ಡ್

  • ಪ್ಯಾನ್ ಕಾರ್ಡ್

ಶಿಕ್ಷಣ ದಾಖಲೆಗಳು

  • PUC ಅಂಕಪಟ್ಟಿ

  • ಪದವಿ ಅಂಕಪಟ್ಟಿ (ಇದ್ದರೆ)

ಬ್ಯಾಂಕ್ ದಾಖಲೆಗಳು

  • ಬ್ಯಾಂಕ್ ಪಾಸ್ ಬುಕ್

  • Cancelled Cheque

ವಿಳಾಸ ದೃಢೀಕರಣ

  • ವೋಟರ್ ಐಡಿ

  • ರೇಷನ್ ಕಾರ್ಡ್

ಇತರೆ ದಾಖಲೆಗಳು

  • ಪೊಲೀಸ್ ವರದಿ (Police Verification Certificate)

  • ಇತ್ತೀಚಿನ ಪಾಸ್ಪೋರ್ಟ್ ಸೈಸ್ ಫೋಟೋ


ಹೊಂದಿರಬೇಕಾದ  ಮೂಲಸೌಕರ್ಯ

ಗ್ರಾಮ ಒನ್ ಕೇಂದ್ರವನ್ನು ಸರಿಯಾಗಿ ನಡೆಸಲು ಕೆಲವು ಉಪಕರಣಗಳು ಅಗತ್ಯ.

ಅವುಗಳೆಂದರೆ:

ಕಂಪ್ಯೂಟರ್ ವ್ಯವಸ್ಥೆ

  • Desktop ಅಥವಾ Laptop

ಪ್ರಿಂಟಿಂಗ್ ಸಾಧನ

  • Printer

  • Biometric Scanner

ಇಂಟರ್ನೆಟ್

  • ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕ

ಕಚೇರಿ ವ್ಯವಸ್ಥೆ

  • ಸೇವಾ ಕೌಂಟರ್

  • ಆಪರೇಟರ್ ಕುರ್ಚಿ

  • ಗ್ರಾಹಕರಿಗೆ 4-5 ಕುರ್ಚಿಗಳು

ಸುರಕ್ಷತಾ ವ್ಯವಸ್ಥೆ

  • CCTV ಕ್ಯಾಮೆರಾ

  • LCD TV (ಮಾಹಿತಿ ಪ್ರದರ್ಶನಕ್ಕಾಗಿ)


ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಗಮನಿಸಬೇಕಾದ ವಿಷಯಗಳು

ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸುವಾಗ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು.

  • ಕೇಂದ್ರವು ಗ್ರಾಮದ ಮುಖ್ಯ ಪ್ರದೇಶದಲ್ಲಿ ಇರಬೇಕು

  • ಜನರಿಗೆ ಸುಲಭವಾಗಿ ತಲುಪುವ ಸ್ಥಳವಾಗಿರಬೇಕು

  • ಸ್ವಚ್ಛ ಮತ್ತು ವ್ಯವಸ್ಥಿತ ಕಚೇರಿ ಇರಬೇಕು

  • ಇಂಟರ್ನೆಟ್ ಸಂಪರ್ಕ ಉತ್ತಮವಾಗಿರಬೇಕು

ಗ್ರಾಮೀಣ ಯುವಕರಿಗೆ ದೊಡ್ಡ ಅವಕಾಶ

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅವಕಾಶಗಳು ಕಡಿಮೆ ಇರುವ ಸಂದರ್ಭದಲ್ಲಿ ಗ್ರಾಮ ಒನ್ ಕೇಂದ್ರ ಯೋಜನೆ ಯುವಕರಿಗೆ ದೊಡ್ಡ ಅವಕಾಶವಾಗಿದೆ.

ಹಳ್ಳಿಗಳಲ್ಲಿಯೇ ಉದ್ಯೋಗವಿಲ್ಲದೆ ಇರುವ ಯುವಕರು ಈಗ ಈ ಯೋಜನೆಯ ಮೂಲಕ ಗ್ರಾಮ ಒನ್ ಕೇಂದ್ರವನ್ನು ಆರಂಭಿಸಿ ಗೌರವಾನ್ವಿತ ಆದಾಯ ಗಳಿಸುವ ಅವಕಾಶ ಪಡೆಯಬಹುದು.

ಈ ಯೋಜನೆಯ ಮೂಲಕ ಯುವಕರು ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಆರಂಭಿಸಿ ಆದಾಯ ಗಳಿಸಬಹುದು. ಇದರ ಜೊತೆಗೆ ಗ್ರಾಮೀಣ ಜನರಿಗೆ ಸರ್ಕಾರದ ಸೇವೆಗಳು ಸುಲಭವಾಗಿ ಲಭ್ಯವಾಗುತ್ತವೆ.

ಇದನ್ನು ಓದಿ: IDBI Bank Recruitment 2026 : 1300 ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ , ಮಾರ್ಚ್‌ 19 ಕೊನೆಯ ದಿನ