KCET Exam 2026 (Rules and Dress Code): ಕರ್ನಾಟಕದ ವಿದ್ಯಾರ್ಥಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಇದೀಗ ಆರಂಭವಾಗುತ್ತಿದೆ. ಈ ವರ್ಷ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಧರಿಸುವ ಪ್ರಮುಖ ಪರೀಕ್ಷೆಗೆ ಸಿದ್ಧರಾಗಿದ್ದಾರೆ.
ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಎಪ್ರಿಲ್ 23 ಮತ್ತು 24 ರಂದು ರಾಜ್ಯದಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 3,30,479 ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇದು ದೊಡ್ಡ ಸಂಖ್ಯೆಯಾಗಿದೆ.
ಈ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಲ್ಲಿ:
- 1,44,380 ಹುಡುಗರು
- 1,86,099 ಹುಡುಗಿಯರು
- 970 ವಿಶೇಷಚೇತನ ಅಭ್ಯರ್ಥಿಗಳು
ನೋಂದಾಯಿಸಿಕೊಂಡಿರುವುದು ಗಮನಾರ್ಹವಾಗಿದೆ.
ಪರೀಕ್ಷಾ ಅಕ್ರಮ ತಡೆಯಲು ಕಠಿಣ ಕ್ರಮ
ಪರೀಕ್ಷಾ ಕೇಂದ್ರಗಳಲ್ಲಿ:
- ಕ್ಯಾಮೆರಾ ಕಣ್ಗಾವಲು
- ವೆಬ್ ಕಾಸ್ಟಿಂಗ್ ವ್ಯವಸ್ಥೆ
- ನಿಗಾ ಕೇಂದ್ರ ವ್ಯವಸ್ಥೆ
ಒಟ್ಟು 745 ಪರೀಕ್ಷಾ ಕೇಂದ್ರಗಳ ಮೇಲೆ ನೇರ ನಿಗಾ ಇರಲಿದೆ. ಇದರ ಮೂಲಕ ಯಾವುದೇ ಅಕ್ರಮ ನಡೆದರೆ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಜಿಲ್ಲಾಮಟ್ಟದಲ್ಲಿ:
- ಜಿಲ್ಲಾಧಿಕಾರಿಗಳು
- ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ಪರೀಕ್ಷಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ಇದನ್ನು ಓದಿ : SSLC ತೃತೀಯ ಭಾಷೆ ಅಂಕ ತೀವ್ರ ವಿವಾದ: CM ಜೊತೆ ಚರ್ಚೆಗೆ ಮುಂದಾದ ಸಚಿವ ಬಂಗಾರಪ್ಪ
ಮೊದಲ ಬಾರಿಗೆ ”Dress code ಅಧಿಕಾರಿ” ನೇಮಕ
ಈ ಬಾರಿ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ dress code ಅಧಿಕಾರಿ ನೇಮಕ ಮಾಡಲಾಗಿದೆ.
ಪರೀಕ್ಷಾ ದಿನದಲ್ಲಿ dress code ನಲ್ಲಿ ಕೆಲವು ನಿಯಮ ಜಾರಿಯಾಗಿದೆ . ಅವುಗಳೆಂದರೆ
ಪುರುಷ ಅಭ್ಯರ್ಥಿಗಳಿಗೆ ನಿಯಮ
- ಅರ್ಧ ತೋಳಿನ ಶರ್ಟ್
- ಸರಳ ಪ್ಯಾಂಟ್
- ಜೇಬು ಇಲ್ಲದ ಅಥವಾ ಕಡಿಮೆ ಜೇಬುಗಳಿರುವ ಪ್ಯಾಂಟ್
ನಿಷೇಧಿತ:
- ಜೀನ್ಸ್
- ಕುರ್ತಾ ಪೈಜಾಮ
- ಶೂ
ಮಹಿಳಾ ಅಭ್ಯರ್ಥಿಗಳಿಗೆ ನಿಯಮ
- ಅರ್ಧ ತೋಳಿನ ಬಟ್ಟೆ
- ಕಾಲರ್ ಇಲ್ಲದ ಉಡುಪು ಉತ್ತಮ
ಸಂಪೂರ್ಣ ನಿಷೇಧಿತ ವಸ್ತುಗಳು
ಪರೀಕ್ಷಾ ಕೇಂದ್ರದಲ್ಲಿ ಈ ವಸ್ತುಗಳನ್ನು ತರುವುದಕ್ಕೆ ಸಂಪೂರ್ಣ ನಿಷೇಧಿಸಲಾಗಿದೆ:
❌ ಮೊಬೈಲ್
❌ ಬ್ಲೂಟೂತ್
❌ ಇಯರ್ ಫೋನ್
❌ ಮೈಕ್ರೋ ಫೋನ್
❌ ಇತರೆ ಎಲೆಕ್ಟ್ರಾನಿಕ್ ಸಾಧನಗಳು
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
OMR Sheet ಭರ್ತಿಯಲ್ಲಿ ಎಚ್ಚರಿಕೆ ಅಗತ್ಯ
ಹಿಂದಿನ ವರ್ಷಗಳಲ್ಲಿ ಕೆಲ ವಿದ್ಯಾರ್ಥಿಗಳು OMR sheet ಸರಿಯಾಗಿ ಭರ್ತಿ ಮಾಡದ ಕಾರಣ ಸಮಸ್ಯೆಗಳು ಉಂಟಾಗಿದ್ದವು.
ಈ ಬಾರಿ ಅಭ್ಯರ್ಥಿಗಳು:
- ಹೆಸರು
- CET ಸಂಖ್ಯೆ
- ಪ್ರಶ್ನೆ ಪತ್ರಿಕೆಯ version code
- ಕ್ರಮ ಸಂಖ್ಯೆ – ಇವುಗಳನ್ನು ಸರಿಯಾಗಿ ನಮೂದಿಸಬೇಕು. ವಿದ್ಯಾರ್ಥಿಗಳು ಅಭ್ಯಾಸ ಮಾಡಿಕೊಳ್ಳಲು:
ವಿಧ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕರಡು OMR sheet download ಮಾಡುವ ಅವಕಾಶ ನೀಡಲಾಗಿದೆ. ಇದನ್ನು ಅಭ್ಯಾಸ ಮಾಡುವ ಮೂಲಕ ತಪ್ಪುಗಳನ್ನು ತಪ್ಪಿಸಬಹುದು.
ವಿದ್ಯಾರ್ಥಿಗಳಿಗೆ ಸಚಿವರಿಂದ ಮಹತ್ವದ ಸಲಹೆ
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆ ನೀಡಿದ್ದಾರೆ.
- PUC ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರೂ ಆತಂಕಪಡಬಾರದು
- ಎರಡನೇ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ
- CET ಪರೀಕ್ಷೆ ತಪ್ಪಿಸಿಕೊಳ್ಳಬಾರದು ಎಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಯಾರೆಲ್ಲ ಶುಲ್ಕ ಪಾವತಿಸಿದ್ದೀರೋ, ಅವರು ಪ್ರವೇಶ ಪತ್ರ download ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ಮುಖ ಗುರುತು ಹಾಗೂ QR ಕೋಡ್ ಪರಿಶೀಲನೆ
ಈ ಬಾರಿ ನಕಲಿ ಅಭ್ಯರ್ಥಿಗಳನ್ನು ತಡೆಯಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ:
- ಅಭ್ಯರ್ಥಿಯ ಮುಖ ಗುರುತು ಪರಿಶೀಲನೆ
- QR ಕೋಡ್ ಸ್ಕ್ಯಾನಿಂಗ್
- ತೀವ್ರ ತಪಾಸಣೆ ಮಾಡಲಾಗುತ್ತದೆ.
ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ ಮುಂಚಿತವಾಗಿ ಬರಬೇಕು. ಈ ನಿಯಮ ಪಾಲಿಸದಿದ್ದರೆ ಪರೀಕ್ಷೆಗೆ ಅವಕಾಶ ಸಿಗದ ಸಾಧ್ಯತೆ ಇದೆ.
ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ
KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರ ಪ್ರಕಾರ, ಈ ಬಾರಿ ನಕಲಿ ಅಭ್ಯರ್ಥಿಗಳನ್ನು ತಡೆಯಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷೆಯ ನಂತರ ಕಾಲೇಜು ಪ್ರವೇಶ ಸಮಯದಲ್ಲೂಅಭ್ಯರ್ಥಿಯ ಫೋಟೋ ಪರಿಶೀಲನೆ ಮಾಡಲಾಗುತ್ತದೆ. ಇದರಿಂದ ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗುತ್ತದೆ.
ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರಮುಖ ಪ್ರವೇಶ ದ್ವಾರ
KCET ಪರೀಕ್ಷೆ ಪ್ರತಿ ವರ್ಷ ಹಲವು ಪ್ರಮುಖ ವೃತ್ತಿಪರ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಮುಖ್ಯವಾಗುತ್ತದೆ.
ಮುಖ್ಯವಾಗಿ ಈ ಕೋರ್ಸ್ಗಳಿಗೆ KCET ಮೂಲಕ ಪ್ರವೇಶ ಸಿಗುತ್ತದೆ:
- ಎಂಜಿನಿಯರಿಂಗ್
- ಕೃಷಿ ವಿಜ್ಞಾನ
- ಪಶುವೈದ್ಯಕೀಯ
- ಫಾರ್ಮಸಿ
- ಇತರೆ ವೃತ್ತಿಪರ ಕೋರ್ಸ್ಗಳು
ಈ ಕಾರಣದಿಂದ KCET ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ.
|
ಪರೀಕ್ಷೆ ದಿನಾಂಕಗಳು : ಎಪ್ರಿಲ್ 23
ಎಪ್ರಿಲ್ 24
|
ಇದನ್ನು ಓದಿ : Bengaluru Ring Road: 210 ಕಿ.ಮೀ ಯೋಜನೆ ,12 ಉಪನಗರಗಳಿಗೆ ಹೊಸ ಸಂಪರ್ಕ !
ಬೆಂಗಳೂರಿನಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು
ರಾಜ್ಯದ ಇತರ ಜಿಲ್ಲೆಗಳಿಗಿಂತ ಬೆಂಗಳೂರು ನಗರದಲ್ಲಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಬೆಂಗಳೂರು ನಗರದಲ್ಲಿ:
- 163 ಪರೀಕ್ಷಾ ಕೇಂದ್ರಗಳು
- 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇದಕ್ಕಾಗಿ ವಿಶೇಷ ಕಮಾಂಡ್ ಸೆಂಟರ್ ಅನ್ನು KEA ಕಚೇರಿಯಲ್ಲಿ ಸ್ಥಾಪಿಸಲಾಗಿದೆ.
ಈ ಬಾರಿ 970 ವಿಶೇಷಚೇತನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಇವರಿಗೆ
- ವಿಶೇಷ ಆಸನ ವ್ಯವಸ್ಥೆ
- ಅಗತ್ಯ ಸಹಾಯ
- ಪ್ರತ್ಯೇಕ ಪರಿಶೀಲನೆ ಇಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಶ್ರವಣ ಸಾಧನ ಬಳಸುವ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬರಬೇಕು ಎಂದು ಸೂಚಿಸಲಾಗಿದೆ.
ವಿದ್ಯಾರ್ಥಿಗಳು ಗಮನಿಸಬೇಕಾದ ಸೂಚನೆಗಳು
ಪರೀಕ್ಷಾ ದಿನ ವಿದ್ಯಾರ್ಥಿಗಳು:
✔️ ಎರಡು ಗಂಟೆ ಮುಂಚಿತವಾಗಿ ಬರುವುದು
✔️ dress code ಪಾಲಿಸುವುದು
✔️ OMR ಸರಿಯಾಗಿ ಭರ್ತಿ ಮಾಡುವುದು
✔️ ನಿಷೇಧಿತ ವಸ್ತುಗಳನ್ನು ತರದಿರುವುದು
ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.