ದೇವರಹಿಪ್ಪರಗಿ : ಉದ್ಯೋಗ ನೇಮಕಾತಿಗೆ ಮನವಿ ಸಲ್ಲಿಕೆ

ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ಮನವಿ ಸಲ್ಲಿಸಲಾಯಿತು. ‘ಜಯ ಕರ್ನಾಟಕ ಸಂಘಟನೆ’ ಪದಾಧಿಕಾರಿಗಳು ತಾಲ್ಲೂಕು ತಹಶೀಲ್ದಾರ್ ಲಿಂಗಣ್ಣ ಅವರಿಗೆ ಮನವಿ ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ರಾಜ್ಯದಲ್ಲಿ ಹಲವು ಪ್ರಮುಖ ಇಲಾಖೆಗಳಲ್ಲಿನ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂಬುದು ಸಂಘಟನೆಯ ಆಕ್ಷೇಪವಾಗಿದೆ. ಈ ಸಮಸ್ಯೆ ಕುರಿತು ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಮತ್ತು ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಆದರೂ ಸರ್ಕಾರದಿಂದ ಸ್ಪಷ್ಟ ಕ್ರಮಗಳು ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು.

ದೇವರಹಿಪ್ಪರಗಿ ತಾಲ್ಲೂಕು ಕಚೇರಿ ಮುಂದೆ ನಡೆದ ಮನವಿ ಸಲ್ಲಿಕೆ ವೇಳೆ ಸಿಂಧಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ್ ಮನಗೂಳಿ, ಆಲಮೇಲ ಘಟಕದ ಅಧ್ಯಕ್ಷ ಭೀಮಾಶಂಕರ ಹೇರ, ಸಂಘಟನೆಯ ಪದಾಧಿಕಾರಿಗಳಾದ ರಮೇಶ್ ರಾಠೋಡ, ನಾಗಪ್ಪ ಹೇರ ಮತ್ತು ಮಶಾಕ್ ವಾಲಿಕಾರ್ ಉಪಸ್ಥಿತರಿದ್ದರು. ಸಂಘಟನೆಯವರು ಮನವಿ ಪತ್ರದ ಮೂಲಕ ಸರ್ಕಾರವು ತಕ್ಷಣ ನೇಮಕಾತಿ ಅಧಿಸೂಚನೆ ಹೊರಡಿಸಿ, ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿ,  ಆದಷ್ಟು ವೇಗವಾದ ಪ್ರಕ್ರಿಯೆ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಹೋರಾಟಕ್ಕೂ ಸ್ಪಂದನೆ ಇಲ್ಲ

ರಾಜ್ಯದಲ್ಲಿ ವರ್ಷಗಳಿಂದ ಹಲವಾರು ಕ್ಷೇತ್ರಗಳಲ್ಲಿ ಹುದ್ದೆಗಳು ಖಾಲಿಇವೆ. ಇದರ ಕುರಿತಂತೆ ಅನೇಕ ಪ್ರತಿಭಟನೆ, ಹೋರಾಟಗಳು ಮನವಿ ಸಲ್ಲಿಕೆಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನು ಮಾಡಿದರು ಕೂಡ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಕೆಲವು ದಿನಗಳ ಹಿಂದೆ ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ ನಡೆದಿತ್ತು. ಉದ್ಯೋಗಾವಕಾಶಗಳ ಕೊರತೆ, ಪರೀಕ್ಷೆಗಳ ವಿಳಂಬ, ನೇಮಕಾತಿ ಪ್ರಕ್ರಿಯೆಯ ಅಸ್ಪಷ್ಟತೆ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಆದರೂ ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ದೊರಕದಿರುವುದು ಯುವಕರಲ್ಲಿ ಅಸಮಾಧಾನ ಹೆಚ್ಚಿಸಿದೆ.

ಈ ಹಿನ್ನೆಲೆದಲ್ಲೇ ದೇವರಹಿಪ್ಪರಗಿಯ ‘ಜಯ ಕರ್ನಾಟಕ ಸಂಘಟನೆ’ ಪದಾಧಿಕಾರಿಗಳು ಶಾಂತಿಯುತವಾಗಿ ಮನವಿ ಸಲ್ಲಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ಸರ್ಕಾರವನ್ನು ಮನವರಿಕೆ ಮಾಡಿಸುವುದೇ ನಮ್ಮ ಉದ್ದೇಶ. ಪ್ರತಿಭಟನೆ ಅಂತಿಮ ಹಂತವಾಗಿರಬೇಕು,” ಎಂದು ಸಂಘಟನೆಯ ಮುಖಂಡರು ತಿಳಿಸಿದರು.

2.73 ಲಕ್ಷ ಹುದ್ದೆಗಳು ಖಾಲಿ!

ತಾಲ್ಲೂಕು ಘಟಕದ ಅಧ್ಯಕ್ಷರಾದ ಸಿದ್ಧರಾಮಪ್ಪ ಅವಟಿ ಮಾತನಾಡಿ, “ ರಾಜ್ಯದಲ್ಲಿ 2.73 ಲಕ್ಷದಷ್ಟು ಹುದ್ದೆಗಳು ಖಾಲಿಯಿದ್ದರು, ಸರ್ಕಾರವು ಇದರ ಕೂರಿತು ಯಾವುದೇ ಗಮನ ಹರಿಸುತ್ತಿಲ್ಲ. ಉದ್ಯೋಗದ ಭರ್ತಿಗಾಗಿ ಸಾವಿರಾರು ವಿಧ್ಯಾರ್ಥಿಗಳು ಬೀದಿಗಿಳಿದು ಹೋರಾಟವನ್ನು ನಡೆಸುತ್ತದ್ದಾರೆ. ಇದ್ಯಾವುದರ ಕೂರಿತು ಸರ್ಕಾರ ಗಂಭೀರವಾಗಿ ಪರಿಗಣಸುತ್ತಿಲ್ಲವೆಂಬುದು ಬೇಜರದ ಸಂಗತಿ ” ಎಂದರು .,” ಎಂದು ಬೇಸರ ವ್ಯಕ್ತಪಡಿಸಿದರು.

ಅದೇ ವೇಳೆ ಮಾತನಡಿದ ಜಿಲ್ಲಾವಕ್ತಾರ ಚನ್ನಪ್ಪಗೌಡ ಬಿರದಾರ ಅವರು ಖಾಲಿ ಇರುವ 2.73 ಲಕ್ಷ ಹುದ್ದೆಗಳಲ್ಲಿ ಶಿಕ್ಷಣ ಇಲಾಖೆ ಸಂಭಂದಿದಂತೆ 69,800. ಹಾಗೂ ಆರೋಗ್ಯ ಇಲಾಖೆಯಲ್ಲಿ 34,908 ಹುದ್ದೆಗಳಿಗ ಮತ್ತು ಗೃಹ ಇಲಾಖೆಯಲ್ಲಿ 23,580 ಇಲಾಖೆಗಳಿಗೆ ಹುದ್ದೆ ಖಾಲಿ ಇವೆ. ಖಾಲಿ ಇರುವ ಹುದ್ದೆಗಳಿಂದ ಆಡಲಿತ ಯಂತ್ರವು ಸರಿಯಾಗಿ ಕಾರ್ಯ ನಿರ್ವಹಿಸಲಾಗುತ್ತಲ್ಲ, ಈ ಬಗ್ಗೆ ಸರ್ಕಾರು ಕಾಲಹರಣ ಮಾಡದೆ ಉದೋಗ ಬರ್ತಿಗೆ ಆದ್ತತೆ ನೀಡಬೇಕೆಂದು ಹೇಳಿದರು.

ಅವರ ಪ್ರಕಾರ, ಉದ್ಯೋಗ ಭರ್ತಿಗೆ ವಿಳಂಬವಾಗುತ್ತಿರುವುದು ರಾಜ್ಯದ ಆಡಳಿತ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಸಿಬ್ಬಂದಿ ಕೊರತೆಯಿಂದ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇದರ ಪರಿಣಾಮ ಇನ್ನಷ್ಟು ಗಂಭೀರವಾಗಿದೆ.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಲಿಂಗಣ್ಣ ಅವರು ಮೇಲಧಿಕಾರಿಗಳಿಗೆ ಈ ಮನವಿಯನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ನಿರೀಕ್ಷೆ ಸಾರ್ವಜನಿಕರಲ್ಲಿ  ಹಾಗೂ ವಿದ್ಯಾರ್ಥಿಗಳಲ್ಲಿ ಮೂಡಿದೆ.

ಇದನ್ನು ಓದಿ : Senior Citizen Card : ಹಿರಿಯ ನಾಗರಿಕರಿಗೆ ಬಂಪರ್ ಲಾಭಗಳು !