ಪಾಕ್‌ ವಿರುದ್ಧ ಭರ್ಜರಿ ಶತಕ ಭಾರಿಸದ ಹ್ಯಾರಿ ಬ್ರೂಕ್‌ – ಇಂಗ್ಲೆಂಡ್‌ ಗೆ 2 ವಿಕೆಟ್‌ಗಳ ರೋಚಕ ಜಯ

ಶ್ರೀಲಂಕಾ :  ಸೂಪರ್‌ 8 ಕ್ಕೆ ತಂಡಗಳು ಆಯ್ಕೆಯಾಗಿದ್ದು ಈ 8 ತಂಡಗಳನ್ನು ಆ ಮತ್ತು ಬಿ ಯಾಗಿ ವಿಭಾಗಿಸಿ ತಲ ನಾಲ್ಕು ತಂಡಗಳಂತೆ ಆಡಿಸಲಾಗುತ್ತದೆ. ನಿನ್ನೆ ನಡೆದ ಪಾಕ್‌ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್‌ ಪಾಕ್‌ ವಿರುದ್ದ ರೋಚಕ ಜಯಗಳಿಸಿದೆ. ಇಂಗ್ಲೆಂಡ್‌ ತಂಡದ ನಾಯಕ ಭರ್ಜರಿ ಶತಕವನ್ನು ದಾಖಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು .

ನಿನ್ನೆ ಮಂಗಳವಾರ ಶ್ರೀಲಂಕಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ಥಾನವು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಫರಾನ್‌ ಮತ್ತು ಸೈಮ್‌ ಆಯುಬ್‌ ಬ್ಯಾಟಿಂಗ್‌ ಗೆ ಇಳಿಯುತ್ತಿದ್ದಂತೆ ಪಾಕ್‌ ಗೆ ಆತಂಕ ಕಾದಿತ್ತು, ಸೈಮ್‌ ಕೇವಲ 7 ರನ್‌ ಗಳಿಗೆ  ತನ್ನ ವಿಕೆಟ್‌ ಕಳೆದು ಕೊಂಡು ಪೆವಿಲಿಯನ್‌ ಗೆ ಮರಳಿದರು .

ಓಪನರ್‌ ಫರಾನ್‌ ಒಬ್ಬರೇ  7 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸುವ ಮೂಲಕ 63(45) ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಮತ್ತುಳಿದ ಯಾವುದೆ ಬ್ಯಾಟರ್‌ನಿಂದ ಒಂದು ಉತ್ತಮ ರನ್‌ ಕಲೆ ಹಾಕಲಾಗಲಿಲ್ಲ ಬಾಬರ್‌ ಆಜಮ್‌ ಮತ್ತೆ ಫಕರ್‌ ಜಮಾನ್‌ ತಲ 25 ರನ್‌ ಗಳಿಸಿದರೆ , ಬೌಲಿಂಗ್‌ ಆಲ್‌ರೌಂಡರ್‌ ಶದಾಬ್‌ ಖಾನ್‌ 23 ರನ್‌ ಗಳಿಸುವ ಮೂಲಕ ತಂಡದ ಒಟ್ಟು ಮೊತ್ತ 9 ಗಳಿಗೆ 164 ಗಳಿಸಿ ತಮ್ಮ ಬಾಟಿಂಗ್‌ ಇನ್ನಿಂಗ್ಸ್‌ ಮುಗಿಸಿದರು.

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡದ ಆರಂಭಿಕರಾದ ಪಿಲ್‌ ಸಾಲ್ಟ್‌ ಮತ್ತು ಜೋಷ್‌ ಬಟ್ಲರ್‌ ಇಬ್ಬರು ಮೊದಲ ಒವರ್‌ ಮಾಡಿದ ಶಾಹಿನ್‌ ಆಫ್ರೀದಿಗೆ ತಮ್ಮ ವಿಕೆಟ್‌ ನೀಡಿ ತಂಡಕ್ಕೆ ಆಘಾತ ನೀಡಿದರು. ಮೂರನೇ ವಿಕೆಟ್‌ಗೆ ಜೊತೆಯಾದ ತಂಡದ ನಾಯಕ ಹ್ಯಾರಿ ಬ್ರೂಕ್‌ ತಂಡವನ್ನು ಮುನ್ನಡೆಸುವಲ್ಲಿ ನೆರವಾದರು .ಮತ್ತುಳಿದ ಯಾವುದೆ ಬ್ಯಾಟರ್‌ನಿಂದ ಒಂದು ಒಳ್ಳೆಯ ಪ್ರದರ್ಶನ ಬಂದಿಲ್ಲ. ವಿಲ್‌ ಜಾಕ್ಸ್‌ ಒಬ್ಬರು 28 ರನ್‌ ಗಳಿಸುವ ಮೂಲಕ ನಾಯಕನಿಗೆ ಜೊತೆಯಾದರು .

 ಹ್ಯಾರಿ ಬ್ರೂಕ್ 100 (51) ಗಳಿಸಿ ಸಂಭ್ರಮಿಸಿದರು. 10 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಸುವ ಮೂಲಕ ಶತಕಗಳಿದ ಅವರು ಶಾಹಿನ್‌ ಶಾ ಅಫ್ರಿದಿ ಗೆ ವಿಕೆಟ್‌ ಒಪ್ಪಸಿ ಮರಳಿದರು . ನಂತರ ಜೋಪ್ರಾ ಆರ್ಚರ್‌ 5 ರನ್ ಗಳಿಸುವ ಮೂಲಕ ಕೊನೆಯ ಒವರ್‌ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಾಕ್‌ ವಿರುದ್ಧ ಗೆಲುವು ಸಾದಿಸು ಮೂಲಕ ಆಡಿದ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿವ ಮೂಲಕ 4 ಅಂಕಗಳನ್ನು ಪಡೆದು ಬಹುತೇಕ ಕ್ಯಾಲಿಫೈಯರ್‌ ಮತಕ್ಕೆ ತಲುಪುವ ನಿರೀಕ್ಷೆಯಲ್ಲಿದೆ. ಮತ್ತೆ ಪಾಕಿಸ್ತಾನ ತಂಡದು ಆಡದ ಎರಡು ಪಂದ್ಯಗಳಲ್ಲಿ ಒಂದು ಸಮಾನ ಅಂಕ ಮತ್ತು ಒಂದು ಸೋಲನ್ನು ಕಾಣುವ ಮೂಲಕ 1 ಅಂಕವನ್ನು ಪಡೆದು ಕೊಂಡಿದೆ.

ಪಾಕಿಸ್ತಾನ ಬ್ಯಾಟಿಂಗ್‌ ವಿವರ

ಬ್ಯಾಟಿಂಗ್‌ :

ಶಾಹಿಬ್ಜಾದ ಫರಾನ್‌- 63 (45), ಸೈಮ್‌ ಆಯುಬ್‌- 7 (7), ಸಲ್ಮಾನ್‌ ಆಘಾ -5 (6), ಭಾಬರ್‌ ಆಜಮ್‌- 25 (24), ಫಕರ್‌ ಜಮಾನ್‌- 25 (16), ಶಾಬದ್‌ ಖಾನ್‌ -23 (11), ಉಸ್ಮಾನ್‌ ಖಾನ್‌- 8 (5), ಮೊಹಮ್ಮದ್‌ ನವಾಜ್‌ -0 (1), ಶಾಹಿನ್‌ ಶಾ ಅಫ್ರಿದಿ -2 (3), ಸಲ್ಮಾನ್‌ ಮಿರ್ಜಾ -2 (3).

ಬೌಲಿಂಗ್‌ :

ಶಾಹಿನ್‌ ಶಾ ಅಫ್ರಿದಿ- 4 (30) ವಿಕೆಟ್‌ .

ಮೊಹಮ್ಮದ್‌ ನವಾಜ್‌ – 2 (26) ವಿಕೆಟ್‌.

ಉಸ್ಮಾನ್‌ ತಾರಿಕ್‌ – 2 (31 ) ವಿಕೆಟ್.‌

 

ಇಂಗ್ಲೆಂಡ್‌ ಬ್ಯಾಟಿಂಗ್‌ ವಿವರ

ಬ್ಯಾಟಿಂಗ್‌ :

ಪಿಲ್‌ ಸಾಲ್ಟ್ – 0 (1),  ಜೋಷ್‌ ಬಟ್ಲರ್‌ – 2 (3), ಹ್ಯಾರಿ ಬ್ರೂಕ್‌ 100 (51), ಬೆತೆಲ್‌ – 8 (10), ಟಾಮ್‌ ಬೆಂತನ್‌-  2 (6), ಸ್ಯಾಮ್‌ ಕರನ್‌ – 16 (15), ವಿಲ್‌ ಜ್ಯಾಕ್‌ – 28 (23), ಜಮಿ ಒವರ್‌ಟನ್‌ – 0 (3), ಲಿಯಮ್‌ ದವ್ಸನ್‌ – 1(1), ಆರ್ಚರ್‌ – 5(2).

ಬೌಲಿಂಗ್‌

ಆರ್ಚರ್‌ – 2 (32) ವಿಕೆಟ್‌

ಒವರ್‌ಟನ್‌ – 2 (26) ವಿಕೆಟ್‌

ಲಿಯಮ್‌ ದವ್ಸನ್‌ – 3 (24) ವಿಕೆಟ್‌

ಆದಿಲ್‌ ರಶಿದ್‌ – 1 (31) ವಿಕೆಟ್‌