ಚೆನೈ : ಇಂದು ಗುರುವಾರ ಚೆನೈನ ಚಿದಂಬರಮ್ ಮೈದಾನದಲ್ಲಿ ನಡದೆ ಭಾರತ ಮತ್ತು ಜಿಂಬಾಂಬೆ ಪಂದ್ಯದಲ್ಲಿ ಭಾರತವು ಭರ್ಜರಿ ಜಯ ಗಲಿಸುವ ಮೂಲಕ ಪ್ಲೇ-ಆಫ್ ಕನಸನ್ನು ಇನ್ನು ಜೀವಂತ ವಾಗಿಸಿಕೊಂಡಿದೆ. ಹಿಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ದ ಮೊದಲ ಹೀನಾಯ ಸೋಲನ್ನು ಭಾರತವು ಕಂಡಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದೆ.
ಮೊದಲು ಟಾಸ್ ಗೆದ್ದ ಜಿಂಬಾಂಬೆ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಭಾರತ ತಂಡದ ಪರ ಮೊದಲ ಇನ್ನಿಂಗ್ಸ್ ಅರಂಭಿಸಲು ಓಪನರ್ಸ್ ಆಗಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮ ಅಂಕಣಕ್ಕೆ ಇಳಿದರು. ಆರಂಭದಲ್ಲಿ ಒಳ್ಳಯ ರನ್‌ಗಳಿಸುವಲ್ಲಿ ಈ ಇಬ್ಬರು ಬ್ಯಾಟರ್ಸ್ ಜೊತೆಯಾದರು.
ಸ್ಯಾಮ್ಸನ್ 15 ಬಾಲ್‌ಗಳಲ್ಲಿ 24 ರನ್ ಭಾರಿಸುತ್ತಿದ್ದಂತೆ ವೇಗಿ ಮುಜರಬಾದ್ ಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. ನಂತರ ಇಶನ್ ಕಿಶನ್ ಕೂಡ ಉತ್ತಮ ಬ್ಯಾಟಿಂಗ್ ಆಡುವ ಮೂಲಕ ಅಭಿಷೇಕ್ ಶರ್ಮಗೆ ಜೊತೆಯಾದರು. ಅಭಿಷೇಕ್ ಒಂದು ಒಳ್ಳೆಯ ಅರ್ಧಶತಕ ಗಳಿಸಿ 4 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸುವ ಮೂಲಕ 55 (30) ಗಳಿಸಿ ಔಟಾದರೇ, ಕಿಶನ್ ಕೂಡ 4 ಬೌಂಡರಿ ಜೊತೆಗೆ 1 ಸಿಕ್ಸರ್ ನೆರವಿನಿಂದ 38 (24) ಸಿಡಿಸಿ ಮರಳಿದರು.
ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಫಾರ್ಮ್ ಮುಂದುವರೆಸಿದರು. ಕೇವಲ 13 ಬಾಲ್ ಗಳಲ್ಲಿ ಇವರು 2 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಸಿಡಿಸುವ ಮೂಲಕ 33 ರನ್ ಗಳಸಿ ಔಟ್ ಆದರು. ನಂತರ ಐದನೇ ವಿಕೇಟ್ ಜೊತೆಯಾದ ಹಾರ್ಧಿಕ್ ಮತ್ತು ತಿಲಕ್ ವರ್ಮ ಜೋಡಿಯು ಜಿಂಬಾಬೆ ಬೌಲರ್ ಗಳನ್ನು ತಳಿಸಿದರು.
ತಿಲಕ್ ವರ್ಮ ಕೇವಲ 16 ಎಸೆತಗಳಲ್ಲಿ 4 ಸಿಕ್ಸರ್ ಜೊತೆಗೆ 3 ಬೌಂಡರಿಗಳನ್ನು ದಾಖಲಿಸುವ ಮೂಲಕ ಬರೊಬ್ಬರಿ 44 ರನ್ ಗಳಿಸಿದರೇ, ಇನ್ನು ಪಾಂಡ್ಯ 23 ಬಾಲ್ ಗಳನ್ನು ಎದುರಿಸದ ಅವರು 4 ಸಿಕ್ಸರ್ ಜೊತೆಗೆ 2 ಬೌಂಡರಿಗಳನ್ನು ಭಾರಿಸುವ ಮೂಲಕ ಕೊನೆಯ ಬಾಲ್ ನಲ್ಲಿ 50 ರನ್ ಗಳೊಂದಿಗೆ ತಮ್ಮ ಅರ್ಧ ಶತಕ ಪೂರೈಸಿಕೊಂಡರು. ಈ ಮೂಲಕ ಭಾರತವು 4 ವಿಕೆಟ್ ನಷ್ಟಕ್ಕೆ 256 ದೊಡ್ಡ ಗುರಿಯನ್ನು ನೀಡಿತು.
ಭಾರತದ ವಿವರ :
ಬ್ಯಾಟಿಂಗ್ ವಿವರ :
ಸ್ಯಾಮ್ಸನ್ – 24 (15) , ಅಭಿಷೇಕ್ ಶರ್ಮ – 55 (30) , ಇಶನ್ ಕಿಶನ್ 38 (24) , ಸೂರ್ಯಕುಮಾರ್ ಯಾದವ್ 33 (13), ಹಾರ್ದಿಕ್ ಪಾಂಡ್ಯ 50 (23) , ತಿಲಕ್ ವರ್ಮ 44 (16) .
ಬೌಲಿಂಗ್ ವಿವರ:
ಅರ್ಶದೀಪ್ ಸಿಂಗ್ – 3 (24) ವಿಕೆಟ್ಸ್
ವರುಣ್ ಚಕ್ರವರ್ತಿ – 1 (35) ವಿಕೆಟ್ಸ್
ಅಕ್ಸರ್ ಪಟೇಲ್ – 1 (35) ವಿಕೆಟ್ಸ್
ಶಿವಂ ದೂಬೆ – 1 (46) ವಿಕೆಟ್ಸ್
ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಭಾರಿ ಮೊತ್ತದ ಗುರಿಯನ್ನು ಬೆನ್ನಟ್ಟಿದ ಜಿಂಬಾಂಬೆ ತಂಡದ ಪರವಾಗಿ ಬ್ರೈನ್ ಬೆನ್ನೆಟ್ ಮತ್ತೇ ತಡಿವನಸೆ ಮರುಮನಿ ಆರಂಭಿಕರಾಗಿ ಸ್ಕ್ರೀಜ್ ಗೆ ಇಳಿದರು. ಆರಂಭದಲ್ಲಿ ಜೊತೆಯಾಟ ಕಲೆಯಾಗುತ್ತಿದ್ದತಂತೆ ಮರುಮನಿ 20 ರನ್ ಗಳಿಸಿ ಅಕ್ಸರ್ ಪಟೇಲ್ ಗೆ ತಮ್ಮ ವಿಕೆಟ್ ಒಪ್ಪಸಿ ಪೆವಿಲಿಯನ್ ಗೆ ಮರಳಿದರು.
ಜಿಂಬಾಂಬೆ ಪರವಾಗಿ ಬೆನ್ನೆಟ್ ಜೊತೆಗೆ ನಾಯಕ ಸಿಕಂದರ್ ರಾಝಾ ರನ್ನು ಹೊರತು ಪಡಿಸಿ ಯಾವುದೇ ಬ್ಯಾಟರ್ಸ್ ಕೂಡ ಭಾರತ ಬೌಲರ್ಸ್ ಗಳನ್ನು ಎದುರಿಸಲು ಸಫಲರಾಗಲಿಲ್ಲ. ನಾಯಕ ಸಿಕಂದರ್ 31 (21) ಗಳಿಸಿ ಔಟಾದರೆ , ಶತಕ ವಂಚಿತ ಒಪನರ್ ಬೆನ್ನೆಟ್ ಏಕಾಂಗಿಯಾಗಿ ತಂಡವನ್ನು ಕೊನೆಯವರೆಗು ಮುನ್ನಡೆಸಿದರರು. ಬೆನ್ನೆಟ್ 59 ಬಾಲ್ ಗಳನ್ನು ಎದುರಿಸುವ ಮೂಲಕ 6 ಸಿಕ್ಸರ್ ಜೊತೆಗೆ 8 ಬೌಂಡರಿಗಳನ್ನು ಭಾರಿಸುವ 97 ರನ್ ಗಳಿಸಿ ನಾಟ್ ಔಟ್ ಆಗಿಯೇ ಉಳಿದರು.
ಪೂರ್ಣವಾಗಿ 20 ಒವರ್ ಆಡಿದರು ಜಿಂಬಾಂಬೆ 184 ರನ್ ಗಳಿಸಲಷ್ಠೇ ಸಮರ್ಥರಾದರು. ಮತ್ತೇ ಭಾರತವು 72 ರನ್ ಗಳ ಭಾರಿ ಅಂತರದ ಜಯವನ್ನು ಗಳಿಸಿ ತಮ್ಮ ಟ್ರೋಫಿ ಕನಸನ್ನ ಜೀವಂತವಾಗಿಸಿ ಕೊಂಡಿತು.
ಜಿಂಬಾಂಬೆ ವಿವರ:
ಬ್ಯಾಟಿಂಗ್ ವಿವರ :
ಬ್ರೈನ್ ಬೆನ್ನೆಟ್ – 97 (59), ತಡಿವನಸೆ ಮರುಮನಿ 20 (20), ಡಿಯನ್ ಮೈರ್ಸ್ 6 (9), ಸಿಕಂದರ್ ರಾಝ 31 (21), ಟೋನಿ ಮುನ್ಯೋಂಗ 11 (6) , ತಶಿಂಗ ಮುಸೆಕಿವ 7 (4), ಬ್ರಾಡ್ ಎವೆನ್ಸ್ 1 (1).
ಬೌಲಿಂಗ್ ವಿವರ:
ರಿಚರ್ಡ್ ನ್ಗರ್ವ -1 (62) ವಿಕೆಟ್ಸ್
ಮುಜರಬಾನಿ – 1 (43) ವಿಕೆಟ್ಸ್
ಟಿನೊಟೆಂದ ಮಪೊಸ – 1 (40) ವಿಕೆಟ್ಸ್
ಸಿಕಂದರ್ ರಾಝ – 1 (29) ವಿಕೆಟ್ಸ್