ವಿಶೇಷ ಪಿಂಚಣಿ ನೋಂದಣಿ ಅಭಿಯಾನ ಆರಂಭ : ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ 3000 ವರೆಗೆ ಪಿಂಚಣಿ ಸೌಲಭ್ಯ

ಬೆಂಗಳೂರು : ಕರ್ನಾಟಕದಲ್ಲಿ ಅಸಂಘಟಿತ ವಲಯದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗಾಗಿ ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗಳಿಗೆ ವಿಶೇಷ ನೋಂದಣಿ ಅಭಿಯಾನ ಆರಂಭವಾಗಿದೆ. ಜನವರಿ 15 ರಿಂದ ಮಾರ್ಚ್ 15, 2026 ರವರೆಗೆ  ನಡೆಯುವ ಈ ಅಭಿಯಾನದಡಿ ಅರ್ಹ ಫಲಾನುಭವಿಗಳು ಭವಿಷ್ಯದ ಪಿಂಚಣಿ ವ್ಯವಸ್ಥೆಯನ್ನು ಪಡೆಯಬಹುದಾಗಿದೆ.

ಕರ್ನಾಟಕದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ (ಪಿಎಂ-ಎಸ್‌ವೈಎಂ) ಮತ್ತು ರಾಷ್ಟ್ರೀಯ ಪಿಂಚಣಿ (NPS) ಯೋಜನೆಗಳಡಿ ಮಾರ್ಚ್ 15, 2026 ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿ 18 ರಿಂದ 40 ವರ್ಷದೊಳಗಿನ, ಮಾಸಿಕ 15,000 ರೂ. ಕ್ಕಿಂತ ಕಡಿಮೆ ಆದಾಯವಿರುವ ಕಾರ್ಮಿಕರು ತಮ್ಮ ವಯಸ್ಸಿಗೆ ಅನುಗುಣವಾಗಿ 55 ರಿಂದ 200 ರೂ. ರವರೆಗೆ ಮಾಸಿಕ ವಂತಿಗೆ ಪಾವತಿಸಿ ನೋಂದಾಯಿಸಿಕೊಳ್ಳಬಹುದು. 60 ವರ್ಷ ತುಂಬಿದ ನಂತರ ಫಲಾನುಭವಿಗಳಿಗೆ ಮಾಸಿಕ 3,000 ರೂ.ಗಳ ಖಚಿತ ಪಿಂಚಣಿ ದೊರೆಯಲಿದೆ.

ದೈನಂದಿನ ಬದುಕಿಗೆ ಆಧಾರವಾಗಿರುವ ಮನೆ ಕೆಲಸದವರು, ಬೀದಿ ಬದಿ ವ್ಯಾಪಾರಿಗಳು ಮತ್ತು ಭಾರ ಹೊರುವ ಹಮಾಲಿಗಳು ಈ ಯೋಜನೆಯ ಲಾಭ ಪಡೆಯಬಹುದು. ಅಷ್ಟೇ ಅಲ್ಲದೇ ಶಾಲೆಯಲ್ಲಿನ ಅಡುಗೆ ತಯಾರಕರು, ಆಶಕಾರ್ಯಕರ್ತೆಯರಿಗೆ ಇದು ನೆರವಾಗುತ್ತದೆ. ಹಾಗೂ ಗ್ರಾಮೀಣ ಭಾಗದ ಕೃಷಿಕರು ಮತ್ತು ಕರಕುಶಲ ಕರ್ಮಿ ಗಳಿಗೆ ಈ ಯೋಜನೆಯು ಒಂದು ಸ್ಥಿರ ಭವಿಷ್ಯವನ್ನು ರೂಪಿಸಲು ನೆರವಾಗುತ್ತದೆ.

ಒಂದನೇ ಹಂತದ ಅಭಿಯಾನ ಮುಗಿದಿದ್ದು, ಎರಡನೇಹಂತದಲ್ಲಿ ಫೆಬ್ರವರಿ 16 ರಿಂದ ಮಾರ್ಚ್ 15 ರವರೆಗೆ ಗ್ರಾಮೀಣ ಪ್ರದೇಶಗಳ  ವ್ಯಾಪ್ತಿಯಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಹಳ್ಳಿಗಳಲ್ಲಿರುವ ಅರ್ಹ ಕಾರ್ಮಿಕರನ್ನು ಈ ಯೋಜನೆಯಡಿ ತರಲು ಈ ಅಭಿಯಾನವನ್ನು ಉದ್ದೇಶಿಸಲಾಗಿದೆ. ಆಯಾ ಪ್ರದೇಶದ ಫಲಾನುಭವಿಗಳು ನಿಗದಿತ ಸಮಯದೊಳಗೆ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪಿಂಚಣಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ನೊಂದಣಿ :

  • ಹತ್ತಿರದ ಸೈಬರ್‌ ಸೆಂಟರ್‌ ಮೂಲಕ ಮತ್ತು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ  ನೊಂದಾಯಿಸಬಹುದು.
  • ಇಲ್ಲವಾದರೆ ಈ ಕೆಳಗೆ ಕೊಟ್ಟ ಲಿಂಕ್‌ ಮೂಲಕ ನೊಂದಾಯಿಸಬಹುದು.
APPLY

ಮಾನದಂಡಗಳು :

  • 18 ರಿಂದ 40 ವರ್ಷದೊಳಗಿನ ವಯೋಮಿತಿ.
  • ಮಾಸಿಕ ಆದಾಯ 5,000 ರೂ ಕ್ಕಿಂತ ಕಡಿಮೆ.
  • ವಯಸ್ಸಿನ ಆದಾರದ ಮೇಲೆ ಮಾಸಿಕ ವಂತಿಕೆ ನಿಗದಿ. ( ಕನಿಷ್ಠ 55 ರಿಂದ ಗರಿಷ್ಠ 200 ರೂ. ರವರೆಗೆ )
  • ಫಲಾನುಭವಿಯು 60 ವರ್ಷ ತುಂಬುವ ಮೊದಲೇ ಮೃತಪಟ್ಟರೆ, ಅವರ ಪತಿ ಅಥವಾ ಪತ್ನಿ ಯೋಜನೆಯನ್ನು ಮುಂದುವರಿಸಬಹುದು
  • ಇಲ್ಲಾವದರೆ ಪಾವತಿಸಿದ ವಂತಿಗೆಗೆ ಸರಿಯಾದ ಬಡ್ಡಿಯೊಂದಿಗೆ ಹಿಂಪಡೆಯಬಹುದು.

ಅಗತ್ಯ ದಾಖಲೆಗಳು:

  •  ಆಧಾರ್ ಕಾರ್ಡ್
  • ಬ್ಯಾಂಕ್ ಉಳಿತಾಯ ಖಾತೆ ಪಾಸ್‌ಬುಕ್
  • ಮೊಬೈಲ್ ಫೋನ್