SSP Scholarship 2026: ಕರ್ನಾಟಕ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ – ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 15ರವರೆಗೆ ವಿಸ್ತರಣೆ

SSP Scholarship 2026: ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊಡ್ಡ ಸಿಹಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರ ನೀಡುವ SSP Scholarship (State Scholarship Portal) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಈಗ ಮಾರ್ಚ್ 15, 2026ರವರೆಗೆ ವಿಸ್ತರಿಸಲಾಗಿದೆ.

ಮೊದಲು ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು ಹಲವು ವಿದ್ಯಾರ್ಥಿಗಳು ಸಮಯದ ಕೊರತೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂಬ ಕಾರಣದಿಂದ ಸರ್ಕಾರ ಹೆಚ್ಚುವರಿ ಸಮಯ ನೀಡಿದೆ. ಇದರಿಂದ ಇನ್ನೂ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಮ್ಮೆ ಉತ್ತಮ ಅವಕಾಶ ಸಿಕ್ಕಿದೆ.

ಈ ಯೋಜನೆಯಡಿ ರಾಜ್ಯದ ಅನೇಕ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಸಹಾಯ ಪಡೆಯುತ್ತಿದ್ದಾರೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಕೈಚೆಲ್ಲದೇ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ.

ಅರ್ಹ ವಿದ್ಯಾರ್ಥಿಗಳು :

  • ಪಿಯುಸಿ (PUC) ವಿದ್ಯಾರ್ಥಿಗಳು

  • ಪದವಿ (UG) ವಿದ್ಯಾರ್ಥಿಗಳು

  • ಸ್ನಾತಕೋತ್ತರ (PG) ವಿದ್ಯಾರ್ಥಿಗಳು

  • ಡಿಪ್ಲೊಮೋ ವಿದ್ಯಾರ್ಥಿಗಳು

  • ಐಟಿಐ (ITI) ವಿದ್ಯಾರ್ಥಿಗಳು

  • ಹಾಸ್ಟೆಲ್ ವಿದ್ಯಾರ್ಥಿಗಳು

ಇದರ ಜೊತೆಗೆ ಕೆಳಗಿನ ವರ್ಗದ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು.

  • ಪರಿಶಿಷ್ಟ ಜಾತಿ (SC)

  • ಪರಿಶಿಷ್ಟ ಪಂಗಡ (ST)

  • ಇತರೆ ಹಿಂದುಳಿದ ವರ್ಗ (OBC)

  • ಅಲ್ಪಸಂಖ್ಯಾತ ವರ್ಗ

ಈ ವರ್ಗದ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಸಾಧ್ಯವಾಗುತ್ತದೆ.

 ಪ್ರಮುಖ ದಾಖಲೆಗಳು :

  • ವಿದ್ಯಾರ್ಥಿಯ ಆಧಾರ್ ಕಾರ್ಡ್

  • ಪೋಷಕರ ಆಧಾರ್ ಕಾರ್ಡ್

  • ಕಾಲೇಜು ನೋಂದಣಿ ಸಂಖ್ಯೆ

  • ಜಾತಿ ಪ್ರಮಾಣ ಪತ್ರ

  • ಆದಾಯ ಪ್ರಮಾಣ ಪತ್ರ

  • ಬ್ಯಾಂಕ್ ಪಾಸ್ ಬುಕ್

  • ಇ-ದೃಢೀಕರಣ ವಿವರಗಳು

SSP Scholarship ಗೆ ಅರ್ಜಿ ಸಲ್ಲಿಸುವಾಗ ಈ ದಾಖಲೆಗಳ ಪ್ರಮುಖವಾಗಿದೆ. ಅವುಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡಿರಬೇಕು. ಯಾವುದೇ ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕರಿಸುವ ಸಾಧ್ಯತೆ ಇದೆ.

 ಅರ್ಜಿ ಸಲ್ಲಿಸುವ ವಿಧಾನ :

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಾಡಲಾಗುತ್ತದೆ.

1️⃣ ಸೈಬರ್ ಸೆಂಟರ್ ಮೂಲಕ

ಹತ್ತಿರದ ಕಂಪ್ಯೂಟರ್ ಸೈಬರ್ ಸೆಂಟರ್ ಅಥವಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

2️⃣ ಮೊಬೈಲ್ ಮೂಲಕ : ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಈ ಕೆಳಗಿನ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು.

website : https://ssp.karnataka.gov.in/
  1. ಅಧಿಕೃತ SSP Portal ವೆಬ್‌ಸೈಟ್‌ಗೆ ಭೇಟಿ ನೀಡಿ

  2. ಲಾಗಿನ್ ಮಾಡಿಕೊಳ್ಳಿ

  3. ಆಧಾರ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ

  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

  5. ಅರ್ಜಿಯನ್ನು ಸಲ್ಲಿಸಿ

ಈ ರೀತಿಯಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.


 ವಿಧ್ಯಾರ್ಥಿಗಳಿಗೆ ಲಾಭಗಳು :

  • ಶಿಕ್ಷಣ ವೆಚ್ಚ ಕಡಿಮೆಯಾಗುತ್ತದೆ

  • ವಿದ್ಯಾರ್ಥಿಗಳಿಗೆ ಆರ್ಥಿಕ ಭದ್ರತೆ ಸಿಗುತ್ತದೆ

  • ಶಿಕ್ಷಣ ಮುಂದುವರಿಸಲು ಪ್ರೇರಣೆ ದೊರೆಯುತ್ತದೆ

ವಿದ್ಯಾರ್ಥಿ ವೇತನ ಪಡೆಯುವ ಮೂಲಕ ಕರ್ಚು ಮಾಡಿದ ಶುಲ್ಕ ಮರುಪಾವತಿಯಾಗುತ್ತದೆ. ಅಷ್ಟೆ ಅಲ್ಲದೇ ವಿದ್ಯಾರ್ಥಿಗಳು ತಮ್ಮ ಭತ್ಯವನ್ನು ಪಡೆಯಬಹುದು ಇದರಿಂದ ದೈನಂದಿನ ಕರ್ಚುಗಳನ್ನು ನಿಬಯಿಸಿಕೊಳ್ಳಲು ನೆರವಾಗುತ್ತದೆ.

ನೇರವಾಗಿ ಬ್ಯಾಂಕ್‌ ಖಾತೆಗೆ ಹಣ ಜಮ ಆಗುವುದರಿಂದ ಯಾವುದೇ ರೀತಿಯ ಗೊಂದಲ ಎದುರಾಗುವುದಿಲ್ಲ. ಮುಂದಿನ ಶಿಕ್ಷಣವನ್ನು ನಡೆಸಲು ಇದು ತುಂಬನೇ ಸಹಾಯವಾಗುವುದ್ದಲ್ಲದೇ ಅವರ ವಿದ್ಯಾಬ್ಯಾಸಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಹಾಯಕವಾಗಿದೆ.

ಶುಲ್ಕ ಮರುಪಾವತಿ  ದ್ಯಾರ್ಥಿವೇತನದ ಹಣ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮ ಆಗುತ್ತದೆ. ಇದರ ಮೂಲಕ ಯಾವುದೇ ರೀತಿಯ ಮಧ್ಯವರ್ತಿಗಳ ಸಮಸ್ಯೆ ಇರುವುದಿಲ್ಲ.

SSP Scholarship ಎಂದರೇನು?

SSP Scholarship ಎಂದರೆ ಕರ್ನಾಟಕ ಸರ್ಕಾರದ State Scholarship Portal ಮೂಲಕ ನೀಡಲಾಗುವ ವಿದ್ಯಾರ್ಥಿವೇತನ ಯೋಜನೆ. ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸಹಾಯ ಮಾಡುವುದು.

ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ:

  • ಕಾಲೇಜು ಶುಲ್ಕ ಮರುಪಾವತಿ

  • ವಿದ್ಯಾರ್ಥಿ ಭತ್ಯೆ

  • ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಶೇಷ ನೆರವು

ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಈ ಪೋರ್ಟಲ್ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಗಳನ್ನು ನೀಡುತ್ತಿವೆ.

ಅರ್ಜಿ ಸಲ್ಲಿಸಲು ಉಳಿದಿರುವ ಸಮಯ ಕಡಿಮೆ

ಈಗ ಸರ್ಕಾರ ಕೊನೆಯ ದಿನಾಂಕವನ್ನು ಮಾರ್ಚ್ 15, 2026ರವರೆಗೆ ವಿಸ್ತರಿಸಿದೆ. ಆದರೆ ವಿದ್ಯಾರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.

ಅರ್ಜಿ ಸಲ್ಲಿಸುವ ವೇಳೆ :

  • ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಬೇಕು

  • ತಪ್ಪಿಲ್ಲದ ಮಾಹಿತಿಯನ್ನು ನೀಡಬೇಕು

  • ಅರ್ಜಿ ಸ್ಥಿತಿಯನ್ನು ಪರಿಶೀಲಿಸಬೇಕು

ಈ ಕ್ರಮಗಳನ್ನು ಅನುಸರಿಸಿದರೆ ವಿದ್ಯಾರ್ಥಿವೇತನ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.

ಇದನ್ನು : ರೈತರಿಗೆ ಭರ್ಜರಿ ಗುಡ್ ನ್ಯೂಸ್ ! ಕುರಿ-ಮೇಕೆ ಘಟಕಕ್ಕೆ 90% ಸಹಾಯಧನ