KPSC Recruitment New Rule 2026: ಸುಪ್ರೀಂ ಕೋರ್ಟ್ ಆದೇಶ! ನೇಮಕಾತಿಗೆ ಹಾಜರಾಗದಿದ್ದರೆ ಹುದ್ದೆ ಸಿಗೋದಿಲ್ಲ

ಬೆಂಗಳೂರು: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಮಹತ್ವದ ಬೆಳವಣಿಗೆ ನಡೆದಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಯು ನೇಮಕಾತಿ ಪೂರ್ವ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ವಿಫಲವಾದರೆ ಅಥವಾ ಕರ್ತವ್ಯಕ್ಕೆ ಹಾಜರಾಗದಿದ್ದರೆ, ಅದೇ ಆಯ್ಕೆ ಪಟ್ಟಿಯಿಂದ ಮುಂದಿನ ಅಭ್ಯರ್ಥಿಗೆ ಹುದ್ದೆ ಪಡೆಯುವ ಹಕ್ಕು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಈ ಮಹತ್ವದ (KPSC Recruitment New Rule 2026) ತೀರ್ಪು ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಒಂದು ಪ್ರಕರಣದ ವಿಚಾರಣೆ ವೇಳೆ ಹೊರಬಂದಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಮಾಡುತ್ತಿರುವ ಅಭ್ಯರ್ಥಿಗಳ ಗಮನ ಸೆಳೆಯುತ್ತಿದೆ.

ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ರಾ ಅವರ ಪೀಠ ಈ ತೀರ್ಪನ್ನು ನೀಡಿದ್ದು, ನೇಮಕಾತಿ ನಿಯಮಗಳನ್ನು ಮೀರಿ ಅಭ್ಯರ್ಥಿಗಳಿಗೆ ಹುದ್ದೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೈಕೋರ್ಟ್ ಪ್ರತಿವಾದಿಯನ್ನು ಉಪವಿಭಾಗಾಧಿಕಾರಿ (KAS) ಹುದ್ದೆಗೆ ಪರಿಗಣಿಸಬೇಕು ಎಂದು ಆದೇಶಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಆದೇಶವನ್ನು ತಿರಸ್ಕರಿಸಿ, ನೇಮಕಾತಿ ನಿಯಮಗಳ ಪ್ರಕಾರ ಮಾತ್ರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಹೇಳಿದೆ.

ವೇಟಿಂಗ್‌ ಲಸ್ಟ್ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟನೆ

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಮುಖವಾಗಿ ನಿರೀಕ್ಷಣಾ ಪಟ್ಟಿಯ ಕುರಿತು ಸ್ಪಷ್ಟನೆ ನೀಡಿದೆ.

  • KPSC ನೇಮಕಾತಿ ಪ್ರಕ್ರಿಯೆಯಲ್ಲಿ ನಿರೀಕ್ಷಣಾ ಪಟ್ಟಿ ಅಥವಾ ಹೆಚ್ಚುವರಿ ಪಟ್ಟಿಗೆ ನಿರ್ದಿಷ್ಟ ಶಾಸನಬದ್ಧ ನಿಯಮಗಳಿಲ್ಲ
  • ಆಯ್ಕೆಯಾದ ಅಭ್ಯರ್ಥಿ ಕರ್ತವ್ಯಕ್ಕೆ ಹಾಜರಾಗದಿದ್ದರೂ, ಮುಂದಿನ ಅಭ್ಯರ್ಥಿಗೆ ಹುದ್ದೆ ಕೇಳುವ ಹಕ್ಕಿಲ್ಲ
  • ಖಾಲಿ ಹುದ್ದೆಗಳನ್ನು ಹೊಸ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಬೇಕು

ಈ ಹೇಳಿಕೆ ಸರ್ಕಾರದ ನೇಮಕಾತಿ ನಿಯಮಗಳ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳಿದೆ.

ಇದನ್ನು ಓದಿ : AO & AAO Recruitment : KPSC ಬದಲು KEA ಮೂಲಕ ಕೃಷಿ ಅಧಿಕಾರಿ ನೇಮಕಾತಿ! 945 AO & AAO ಹುದ್ದೆಗಳ ನೇಮಕಾತಿ ಆದೇಶ

ಆಯ್ಕೆ ಪಟ್ಟಿಯಿಂದ ಹುದ್ದೆ ಪಡೆಯಲು ಹಕ್ಕಿಲ್ಲ

ನ್ಯಾಯಪೀಠ ತನ್ನ ತೀರ್ಪಿನಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ತಿಳಿಸಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರು ಇರುವುದರಿಂದಲೇ ಹುದ್ದೆ ಪಡೆಯಲು ಖಚಿತ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

  • ಆಯ್ಕೆ ಪಟ್ಟಿಯಲ್ಲಿ ಹೆಸರು ಇದ್ದರೂ ಹುದ್ದೆ ಖಚಿತವಲ್ಲ
  • ನಿಯಮಾನುಸಾರ ಕ್ರಮಗಳನ್ನು ಪೂರ್ಣಗೊಳಿಸಬೇಕು
  • ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯ

ಪ್ರಕರಣದ ಹಿನ್ನೆಲೆ ಮಾಹಿತಿ

ಈ ಪ್ರಕರಣ 2011ರಲ್ಲಿ KPSC ಹೊರಡಿಸಿದ್ದ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದೆ.  ಆಯ್ಕೆ ಪಟ್ಟಿಯ ಪ್ರಕಾರ ಅಯ್ಯಪ್ಪ ಎಂ.ಎ. ಅವರಿಗೆ KAS ಹುದ್ದೆ ನೀಡಲಾಗಿತ್ತು ಮತ್ತು ಸಂತೋಷ್ ಕುಮಾರ್ ಅವರಿಗೆ ತೆರಿಗೆ ಹುದ್ದೆ ನೀಡಲಾಗಿತ್ತು.

ಆದರೆ ನಂತರ ಒಂದು ಪ್ರಮುಖ ಬೆಳವಣಿಗೆ ನಡೆದಿದ್ದು ಈ ಪ್ರಕರಣಕ್ಕೆ ಕಾರಣವಾಗಿದೆ.

KAS ಹುದ್ದೆಗೆ ಆಯ್ಕೆಯಾಗಿದ್ದ ಅಯ್ಯಪ್ಪ ಎಂ.ಎ. ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲಿಲ್ಲ, ಪೊಲೀಸ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲಿಲ್ಲ ಮತ್ತು ಕರ್ತವ್ಯಕ್ಕೂ ಹಾಜರಾಗಲಿಲ್ಲ.ಈ ಕಾರಣದಿಂದ ಆ ಹುದ್ದೆ ಖಾಲಿ ಉಳಿಯಿತು.

ಈ ವೇಳೆ ಸಂತೋಷ್ ಕುಮಾರ್ ಅವರು ತಮಗೆ ಮೆರಿಟ್ ಆಧಾರದಲ್ಲಿ KAS ಹುದ್ದೆ ನೀಡಬೇಕು ಎಂದು ಮನವಿ ಸಲ್ಲಿಸಿದರು. ಆದರೆ ಮನವಿಯನ್ನು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ತಿರಸ್ಕರಿಸಿತು.

ಸರ್ಕಾರ ಮನವಿ ತಿರಸ್ಕರಿಸು ಕಾರಣ

1997 ನೇಮಕಾತಿ ನಿಯಮಗಳಲ್ಲಿ ನಿರೀಕ್ಷಣಾ ಪಟ್ಟಿಯ ವ್ಯವಸ್ಥೆಯೇ ಇಲ್ಲ.

ಅಂದರೆ Waiting list concept ಇಲ್ಲ, ಖಾಲಿ ಹುದ್ದೆ ಹೊಸ ನೇಮಕಾತಿಯಲ್ಲಿ ಮಾತ್ರ ಭರ್ತಿ ಈ ಕಾರಣದಿಂದ ಸರ್ಕಾರ ಅವರ ಮನವಿಯನ್ನು ನಿರಾಕರಿಸಿತು.

ಹೈಕೋರ್ಟ್ ತೀರ್ಪು

ಈ ನಿರ್ಧಾರವನ್ನು ಪ್ರಶ್ನಿಸಿದ ಸಂತೋಷ್ ಕರ್ನಾಟಕ ಹೈಕೋರ್ಟ್‌ಗೆ ಹೋದರು.‌  KAS ಹುದ್ದೆಗೆ ಪರಿಗಣಿಸಬೇಕು ಎಂದು ಹೈಕೋರ್ಟ್‌ ಆದೇಶ ನೀಡಿತು.

 ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಅದರಂತೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್   ರದ್ದುಪಡಿಸಿದೆ.

ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಹೇಳಿರುವುದೇನೆಂದರೆ:

  • ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ
  • ಆಯ್ಕೆಯಾದವರು ಹಾಜರಾಗದಿದ್ದರೆ ಹೊಸ ನೇಮಕಾತಿ ನಡೆಸಬೇಕು
  • ಅದೇ ಪಟ್ಟಿಯಿಂದ ಹುದ್ದೆ ನೀಡಲು ಸಾಧ್ಯವಿಲ್ಲ

ಅಭ್ಯರ್ಥಿಗಳು ಗಮನಿಸ ಬೇಕಾದ ಅಂಶಗಳು

✔ ನೇಮಕಾತಿ ಪ್ರಕ್ರಿಯೆ ಸಮಯಕ್ಕೆ ಪೂರ್ಣಗೊಳಿಸಬೇಕು
✔ ವೈದ್ಯಕೀಯ ಪರೀಕ್ಷೆ ಕಡ್ಡಾಯ
✔ ಪೊಲೀಸ್ ದೃಢೀಕರಣ ಅಗತ್ಯ
✔ ಕರ್ತವ್ಯಕ್ಕೆ ಸಮಯಕ್ಕೆ ಹಾಜರಾಗಬೇಕು

ಈ ಪ್ರಕರಣದ ತೀರ್ಪು ಮುಂದಿನ KPSC ಹಾಗೂ ಇತರ ಸರ್ಕಾರಿ ನೇಮಕಾತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

  • Waiting list ಬಗ್ಗೆ ಹೊಸ ನಿಯಮ ಬರಬಹುದು
  • ನೇಮಕಾತಿ ಪ್ರಕ್ರಿಯೆ ಹೆಚ್ಚು ಕಟ್ಟುನಿಟ್ಟಾಗಬಹುದು
  • ಅಭ್ಯರ್ಥಿಗಳು ಹೆಚ್ಚು ಜಾಗರೂಕರಾಗಬೇಕಾಗಬಹುದು

ಈ ತೀರ್ಪು recruitment system ಅನ್ನು ಹೆಚ್ಚು ಶಿಸ್ತಿನತ್ತ ಕೊಂಡೊಯ್ಯುವ ಸಾಧ್ಯತೆ ಇದೆ.


ಸುಪ್ರೀಂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪು ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಹೊಸ ಸ್ಪಷ್ಟತೆಯನ್ನು ತಂದಿದೆ. ನೇಮಕಾತಿ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಎಂಬ ಸಂದೇಶವನ್ನು ಇದು ನೀಡುತ್ತದೆ.

ಆಯ್ಕೆ ಪಟ್ಟಿಯಲ್ಲಿ ಹೆಸರು ಇದ್ದರೂ ಅದು ಖಚಿತ ಹುದ್ದೆಯ ಹಕ್ಕು ನೀಡುವುದಿಲ್ಲ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿ ಈ ತೀರ್ಪು ಮಹತ್ವದ ಮಾದರಿಯಾಗುವ ಸಾಧ್ಯತೆ ಇದೆ.