Village Business Ideas In kannada , Business Ideas In Kannada

         Village Business Ideas In kannada , Business Ideas In Kannada

” ತೆಂಗಿನ ನಾರಿನಿಂದ ಗೊಬ್ಬರ ತಯಾರಿಸುವ ಬ್ಯುಸಿನೆಸ್”

ಈ ಬ್ಯುಸಿನೆಸ್ ನ ನಿಮ್ಮ ಊರಲ್ಲೇ ಅಥವಾ ನಿಮ್ಮ ಹಳ್ಳಿಯಲ್ಲೇ ಮಾಡಬಹುದು. ಫ್ರೆಂಡ್ಸ್ ತೆಂಗಿನ ಸಿಪ್ಪೆ ನಿಮ್ಮ ಮನೆಯಲ್ಲಿ ಇಲ್ಲಾಅಂತ ಅಂದ್ರೆ ಬೇರೆ ರೈತರಿಂದ ಹೋಲ್ ಸೇಲ್ ಆಗಿ ಖರೀದಿಸಿ ಪುಡಿ ಮಾಡಿ, ಗೊಬ್ಬರನ ತಯಾರಿಸಬಹುದು. ತೆಂಗಿನ ನಾರಿನ ಪುಡಿಯಿಂದ ಗೊಬ್ಬರ ತಯಾರಿಸಿ ನರ್ಸರಿಯಲ್ಲಿ ಬಳಸಿದರೆ ಸಸಿಗಳ ಬೇಗನೆ ಬೆಳೆಯುತ್ತೆ. ತೆಂಗಿನ ಗಿಡನ ಬೆಳೆಸಿದರೆ ತೆಂಗಿನ ಕಾಯಿಯ ಜೊತೆಗೆ ಕಾಯಿಯ ಸಿಪ್ಪೆ ಅದರ ಚಿಪ್ಪು ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕ್ಕೆ ಆಗುತ್ತೆ.

ತೆಂಗಿನ ನಾರಿನ ಗೊಬ್ಬರಕ್ಕೆ ಏನೆಲ್ಲಾ ಮಿಶ್ರಣ ಮಾಡಬೇಕು ಅಂತ ನೋಡೋದಾದ್ರೆ , ಸಾಮಾನ್ಯವಾಗಿ ಇದರ ಬಗ್ಗೆ ರೈತರಿಗೆ ತಿಳಿದಿರುತ್ತೆ. ಈ ಪುಡಿಯನ್ನು ಬಳಸಿಕೊಂಡು ನರ್ಸರಿಗೆ ಬೇಕಾಗುವಂತ ಗೊಬ್ಬರವನ್ನು ತಯಾರಿಸಿಕೊಳ್ಳಬಹುದು. ಇದನ್ನು ಅರ್ಕ ಫರ್ಮೆಂಟೇಡ್ ಕೊಕೊ ಫೀಟ್ ಅಂತ ಕರಿತಾರೆ. 1 ಟನ್ ಗೆ 1 ಕೆ.ಜಿ ಯಷ್ಟು ಅರ್ಕ ಮೈಕ್ರೋಬಿಯನ್ ಕನ್ಸೋರ್ಷಿಯಂ ಹಾಗೆನೇ ಅರ್ಕ ಡಿಕಂಪೋಸರ್ ಎರಡು ಕಲ್ಲರ್ ಹಾಕಿ ಈ ಪುಡಿ ಗೊಬ್ಬರವನ್ನು ತಯಾರಿಸಬೇಕಾಗುತ್ತದೆ.

Village Business Ideas In kannada

ತಯಾರಿಸುವ ವಿಧಾನ ಹೇಗೆ ಅಂತ ನೋಡೋದಾದ್ರೆ 1 ಲೇಯರ್ ತೆಂಗಿನ ಪುಡಿಯನ್ನು ನೆಲದ ಮೇಲೆ ಹರಡಬೇಕು. ಅದಕ್ಕೆ ಒಂದು ಟನ್ ಗೆ 5 ಕೆ.ಜಿ ಯಷ್ಟು ಅರ್ಕ ಡಿಕಂಪೋಸರನ್ನ ಹಾಕಬೇಕಾಗುತ್ತದೆ. ಒಂದು ಟನ್ 200 ಕೆ.ಜಿ ಯಂತೆ 5 ಲೇಯರ್ ಮಾಡಿಕೊಳ್ಳಬೇಕು. ನಂತರ ಒಂದು ಲೇಯರ್ ಕಲ್ಚರ್ , ಒಂದು ಲೇಯರ್ ಯೂರಿಯಾ ಗೊಬ್ಬರವನ್ನು ಮಿಕ್ಸ್ ಮಾಡ್ಕೊಬೇಕು. ಹೀಗೆ 5 ಲೇಯರ್ ಒಂದರ ಮೇಲೆ ಒಂದರಂತೆ ಮಾಡಬೇಕಾಗುತ್ತದೆ. ಈ ಯೂರಿಯಾ ಗೊಬ್ಬರವನ್ನು ಒಂದು ಟನ್ ಗೆ 3 ಕೆ.ಜಿ ಹಾಕ ಬೇಕು. ಇದಕ್ಕೆ ಸು. 70 ಪರ್ಸೆಂಟ್ ರಷ್ಟು ತೇವಾಂಶ ಇರುವಂತೆ ಕಾಪಾಡಿಕೊಳ್ಳಬೇಕಾಗುತದೆ. 70 ಪರ್ಸೆಂಟ್ ಅಂದ್ರೆ ಕೈಯಲ್ಲಿ ಹಿಡಿದು ಹಿಂಡಿದ್ರೆ 2 – 3 ಹನಿ ನೀರು ಕೆಳಗೆ ಬೀಳುವಂತೆ ಇರಬೇಕು.

ಹೀಗೆ ನೀವು ತೇವಾಂಶವನ್ನು ಕಾಪಾಡಿಕೊಳ್ಳಬೇಕು. ಬಿಸಿಲು ಬೀಳದಂತೆ ಇದನ್ನ ಕವರ್ ನಲ್ಲಿ ಕಟ್ಟಿ ಇಡಬೇಕಾಗುತ್ತದೆ. ನಂತರ ನೀವು ಆಗಾಗ ತೇವಾಂಶ ಇರುವಂತೆ ಕಾಪಾಡಬೇಕಾಗುತ್ತದೆ .15 ದಿನಗಳ ಕಾಲ ಹೀಗೆನೇ ಇಡಬೇಕು. ನಂತರ ಅದನ್ನ ಮಿಶ್ರಣ ಮಾಡಿ ಮತ್ತೆ ಅದೇ ರೀತಿ ಕವರ್ ಮಾಡಿ 15 ದಿನ ಹಾಗೆನೇ ಇಡಬೇಕು. ನಂತರ 29 ನೇ ದಿನ ಇದಕ್ಕೆ ಅರ್ಕ ಮೈಕ್ರೋವಿಯರ್ ಕನ್ಸೋರ್ಷಿಯಂ ಅನ್ನೊ ಜೈವಿಕ ಗೊಬ್ಬರ ಸಿಗುತ್ತೆ. ಅದನ್ನ ಒಂದು ಟನ್ ಗೆ 1 ಕೆ.ಜಿ ಪ್ರಮಾಣದಲ್ಲಿ ಮಿಶ್ರಣ ಮಾಡಿ 1 ದಿನ ಅಥವಾ 2 ದಿನದ ನಂತರ ಪ್ಯಾಕ್ ಮಾಡಿ ಮಾರಾಟ ಮಾಡುಬಹುದು.

Village Business Ideas In kannada

ಫ್ರೆಂಡ್ಸ್ ನೀಮಗೆ 1 ಕೆ.ಜಿ ತಯಾರಿಸಲು 1.50 ಪೈಸೆ ಅಥವಾ 2 ರೂಪಾಯಿ ಖರ್ಚು ಬೀಳುತ್ತದೆ. ನೀವು ಮಾರ್ಕೆಟ್ ಬೆಲೆಗೆ ತಕ್ಕಂತೆ ಸೇಲ್ ಮಾಡ್ಕೊಬಹುದು.
ಇನ್ನ ಫ್ರೆಂಡ್ಸ್ ಮಷಿನ್ ಎಲ್ಲಿ ಸಿಗುತ್ತೆ ಅಂತ ನೋಡೋದಾದ್ರೆ ಆನ್ಲೈನ್ ನಲ್ಲಿ ಖರೀದಿಸಬಹುದು.

ಒಕೆ ಫ್ರೆಂಡ್ಸ್ ನಿಮಗೆ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ, ಕಮೆಂಟ್ ಮಾಡಿ ಧನ್ಯವಾದಗಳು…..

Leave a Reply

Your email address will not be published.