Toxic Movie Release : ಯಶ್‌ ಅವರ ‘ ಟಾಕ್ಸಿಕ್ ’ ಸಿನಿಮಾಗೆ ಹೊಸ ಸವಾಲು! ಜೂನ್–ಜುಲೈನಲ್ಲಿ 12 ಸಿನಿಮಾಗಳ ಭಾರೀ ಸ್ಪರ್ಧೆ

Toxic Movie Release : ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಟಾಕ್ಸಿಕ್’ (Toxic Movie) ಈಗ ಮತ್ತೊಂದು ದೊಡ್ಡ ಸವಾಲಿನ ಎದುರು ನಿಂತಿದೆ. ನಟ ಯಶ್ ಅಭಿನಯದ ಈ ಭಾರೀ ಬಜೆಟ್ ಸಿನಿಮಾ ಈಗ ಬಿಡುಗಡೆ ವೇಳಾಪಟ್ಟಿಯಲ್ಲಿ ದೊಡ್ಡ ಸ್ಪರ್ಧೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 ಸಿನಿಮಾ ಜೂನ್ 4ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.  ಜೂನ್ ಮತ್ತು ಜುಲೈ ತಿಂಗಳಲ್ಲಿ ಸುಮಾರು 12 ಸಿನಿಮಾಗಳೊಂದಿಗೆ ‘ಟಾಕ್ಸಿಕ್’ ಸ್ಪರ್ಧೆ ಎದುರಿಸಬೇಕಾಗಿದೆ ಎಂಬ ವರದಿಗಳು ಹೊರಬಂದಿವೆ. ಇದು ಚಿತ್ರದ ಬಾಕ್ಸ್ ಆಫೀಸ್ ಪ್ರಯಾಣಕ್ಕೆ ದೊಡ್ಡ ಸವಾಲಾಗಬಹುದು ಎಂದು ಸಿನಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಟಾಕ್ಸಿಕ್‌ ಮುಂದಿರುವ ಹೊಸ ಸವಾಲು

‘ಟಾಕ್ಸಿಕ್’ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಈ ರೀತಿಯ ಸಿನಿಮಾಗಳು ಸಾಮಾನ್ಯವಾಗಿ ಕನಿಷ್ಠ ಎರಡು ತಿಂಗಳು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣಬೇಕಾಗುತ್ತದೆ.

ಆದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಅನೇಕ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ‘ಟಾಕ್ಸಿಕ್’ ಸಿನಿಮಾ ತನ್ನ ಪ್ರದರ್ಶನವನ್ನು ದೀರ್ಘಕಾಲ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಬಹುದು.

ಸಿನಿ ಮಾರುಕಟ್ಟೆಯಲ್ಲಿ ನಿರಂತರವಾಗಿ ಹೊಸ ಸಿನಿಮಾಗಳು ಬಂದರೆ ಹಳೆಯ ಸಿನಿಮಾಗಳಿಗೆ ಸ್ಕ್ರೀನ್‌ಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಇದು ‘ಟಾಕ್ಸಿಕ್’ ಸಿನಿಮಾಗೆ ದೊಡ್ಡ ಪರೀಕ್ಷೆಯಾಗಿ ಪರಿಣಮಿಸಬಹುದು.

ಇದನ್ನು : Dhurandhar-2 : ರಿಲೀಸ್‌ಗೂ ಮುನ್ನವೇ “ಉಸ್ತಾದ್‌ ಭಗತ್‌ ಸಿಂಗ್‌” ಗೆ ಭಾರಿ ನಷ್ಟ !


ಜೂನ್ ತಿಂಗಳಲ್ಲಿನ ಸಿನಿಮಾಗಳ ಪಟ್ಟಿ

‘ಟಾಕ್ಸಿಕ್’ ಬಿಡುಗಡೆ (Toxic Movie Release) ನಂತರ ತಕ್ಷಣವೇ ಹಲವಾರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಜೂನ್ 5ರಂದು ಹಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾ “ಮಾಸ್ಟರ್ ಆಫ್ ದಿ ಯೂನಿವರ್ಸ್” ಬಿಡುಗಡೆಯಾಗಲಿದೆ.

ಜೂನ್ 12 “ಹೇ ಜವಾನಿ ತೋ ಇಷ್ಕ್ ಹೋನಾ ಹೇ” ಮತ್ತು“ಮೇ ವಾಪಸ್ ಆವುಂಗಾ” ರಂದು ಎರಡು ಸಿನಿಮಾಗಳು ತೆರೆಗೆ ಬರಲಿವೆ.

ಇದರ ನಂತರ ಜೂನ್ 19ರಂದು ಇನ್ನೂ ಎರಡು ದೊಡ್ಡ ಸಿನಿಮಾಗಳಾದ “ಕಾಕ್ಟೇಲ್ 2” ಮತ್ತು “ಟಾಯ್ ಸ್ಟೋರಿ 5” ಬಿಡುಗಡೆಯಾಗಲಿವೆ.

ಇದಾದ ಬಳಿಕ ಜೂನ್ 26ರಂದು “ಕ್ಯಾರಿ ಆನ್ ಜಟ್ಟಾ 4” ಬಿಡುಗಡೆಯಾಗಲಿದೆ. ಈ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ಮೇಲೆ ಗಮನ ಸೆಳೆಯುವ ಸಾಧ್ಯತೆ ಇದೆ.

ಜುಲೈ ತಿಂಗಳಲ್ಲೂ ಭಾರೀ ಸ್ಪರ್ಧೆ

ಜೂನ್ ತಿಂಗಳು ಮಾತ್ರವಲ್ಲ, ಜುಲೈ ತಿಂಗಳಲ್ಲೂ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಜುಲೈ 1ರಂದು “ಮಿನಿಯನ್ಸ್ 2” ಬಿಡುಗಡೆಯಾಗಲಿದೆ.

ಜುಲೈ 3ರಂದು “ಧಮಾಲ್ 4” ತೆರೆಗೆ ಬರಲಿದೆ.

ಇದರ ನಂತರ ಜುಲೈ 9ರಂದು “ಮೋನಾ” ಜುಲೈ 10ರಂದು “ಆಲ್ಫಾ” ಜುಲೈ 17ರಂದು “ದಿ ಒಡಿಸ್ಸಿ” ಬಿಡುಗಡೆಯಾಗಲಿದ್ದು,

ಇವುಗಳ ನಂತರ ಜುಲೈ 31 ಅಂತ್ಯದಲ್ಲಿ ಮತ್ತೊಂದು ದೊಡ್ಡ ಸಿನಿಮಾ  “ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ” ಬಿಡುಗಡೆಯಾಗಲಿದೆ. ಇದು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ.


‘ಟಾಕ್ಸಿಕ್’ ಬಿಡುಗಡೆ ಮುಂದೂಡಲು ಕಾರಣ?

ಮೊದಲಿಗೆ ‘ಟಾಕ್ಸಿಕ್’ ಸಿನಿಮಾ ಬೇರೆ ದಿನಾಂಕದಲ್ಲಿ ಬಿಡುಗಡೆಯಾಗುವ ಯೋಜನೆ ಇತ್ತು. ಆದರೆ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಪರಿಸ್ಥಿತಿ ಕಾರಣವಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿತ್ತು.

ಅಂತರರಾಷ್ಟ್ರೀಯ ಪರಿಸ್ಥಿತಿಗಳು ಹಾಗೂ ವಿದೇಶಿ ಮಾರುಕಟ್ಟೆಯ ಮೇಲಿನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ನಿರ್ಧಾರದಿಂದಾಗಿ ಒಂದು ದೊಡ್ಡ ಕ್ಲ್ಯಾಶ್ ತಪ್ಪಿದೆ. ಏಕೆಂದರೆ ಅದೇ ಮಾರ್ಚ್‌ 19 ರಂದು  ಮತ್ತೊಂದು ದೊಡ್ಡ ಸಿನಿಮಾ ‘ಧುರಂಧರ್ 2’ ಕೂಡ ಬಿಡುಗಡೆಯಾಗಬೇಕಾಗಿತ್ತು.

ಟಾಕ್ಸಿಕ್ vs ಧುರಂಧರ್ ’

ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳ ಕಾಲ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾಗಳ ನಡುವೆ ಕ್ಲ್ಯಾಶ್ ಆಗಬಹುದು ಎಂಬ ಚರ್ಚೆ ಜೋರಾಗಿತ್ತು.

ಇಬ್ಬರೂ ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ಮೇಲೆ ಅದರ ಪರಿಣಾಮ ಹೇಗಿರಬಹುದು ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಹೆಚ್ಚಿತ್ತು.

ಕೊನೆಗೆ ಈ ಕ್ಲ್ಯಾಶ್ ತಪ್ಪಿಸಲು ‘ಟಾಕ್ಸಿಕ್’ ತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಲು ನಿರ್ಧರಿಸಿತು.

‘ಟಾಕ್ಸಿಕ್’ ಸಿನಿಮಾ ನಿರೀಕ್ಷೆ

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ನಂತರ ಯಶ್ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ಇದಾಗಿದೆ.

ಹೀಗಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳಷ್ಟೇ ಅಲ್ಲ, ಸಿನಿ ವಲಯದಲ್ಲೂ ದೊಡ್ಡ ನಿರೀಕ್ಷೆ ಇದೆ. ಚಿತ್ರದ ಕಥೆ, ತಂತ್ರಜ್ಞಾನ, ಹಾಗೂ ಅಂತರರಾಷ್ಟ್ರೀಯ ಮಟ್ಟದ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಇತರ ಭಾಷೆಗಳಲ್ಲೂ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಹೀಗಾಗಿ ಈ ಸಿನಿಮಾದ ಬಾಕ್ಸ್ ಆಫೀಸ್ ಯಶಸ್ಸು ಭಾರತೀಯ ಸಿನಿರಂಗದಲ್ಲಿ ಮತ್ತೊಂದು ದೊಡ್ಡ ಮೈಲುಗಲ್ಲಾಗಬಹುದು ಎಂಬ ನಿರೀಕ್ಷೆ ಇದೆ.

ಬಾಕ್ಸ್ ಆಫೀಸ್ ಸ್ಪರ್ದೆ

ಇಷ್ಟೊಂದು ಸಿನಿಮಾಗಳ ನಡುವೆ ‘ಟಾಕ್ಸಿಕ್’ ಸಿನಿಮಾ ಹೇಗೆ ಪ್ರದರ್ಶನ ಕಾಣಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

ಒಳ್ಳೆಯ ಕಥೆ, ಉತ್ತಮ ಪ್ರಚಾರ ಹಾಗೂ ಅಭಿಮಾನಿಗಳ ಬೆಂಬಲ ಇದ್ದರೆ ಈ ಸ್ಪರ್ಧೆಯನ್ನು ಮೀರಿ ಸಿನಿಮಾ ಯಶಸ್ಸು ಸಾಧಿಸುವ ಸಾಧ್ಯತೆ ಕೂಡ ಇದೆ.

ಆದರೆ ಒಂದೇ ಸಮಯದಲ್ಲಿ ಅನೇಕ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್ ಸ್ಪರ್ಧೆ ತೀವ್ರವಾಗುವುದು ಖಚಿತ.