ಬೆಂಗಳೂರು: ಕರ್ನಾಟಕ ಸರ್ಕಾರದಕಟ್ಟಡ ನಿರ್ಮಾಣದಂತಹ ಕಠಿಣ ಹಾಗೂ ಅಪಾಯಕರ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರ ಕುಟುಂಬಗಳಿಗೆ ಮಹತ್ವದ ಘೋಷಣೆ ಹೊರಡಿಸಿದೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಶಿಕ್ಷಣ ಸಹಾಯಧನ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ದುರದೃಷ್ಟವಶಾತ್ ಕೆಲಸದ ಸ್ಥಳದಲ್ಲಿ ಅಪಘಾತ ಸಂಭವಿಸಿ ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಇದರ ಪರಿಣಾಮವಾಗಿ ಅನೇಕ ಬಾರಿ ಕಾರ್ಮಿಕರ ಮಕ್ಕಳು ತಮ್ಮ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ಈ ಹಿಂದೆ ಮೃತ ಪಟ್ಟ ಕುಟುಂಬಗಳಿಗೆ ಕೇವಲ ಪೆನ್ಷನ್ ಸೌಲಭ್ಯವನ್ನುಮಾತ್ರ ನೀಡಲಾಗುತ್ತಿತ್ತು.ಸಮಸ್ಯೆಯನ್ನು ಗಮನಿಸಿದ ಕಾರ್ಮಿಕ ಕಲ್ಯಾಣ ಮಂಡಳಿ ಈಗ ಮಹತ್ವದ ತಿದ್ದುಪಡಿ ಮಾಡಿ ಮೃತ ಕಾರ್ಮಿಕರ ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ಸಹಾಯಧನ ನೀಡುವ ಯೋಜನೆಯನ್ನು ಆರಂಭಿಸಿದೆ. ಈ ಯೋಜನೇ 2025-27ರ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬರಲಿದೆ.
ಹಿಂದಿನ ನಿಯಮದ ಪ್ರಕಾರ
ಇದುವರೆಗೆ ಕಾರ್ಮಿಕರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಮುಖ್ಯವಾಗಿ ಪಿಂಚಣಿ ಸೌಲಭ್ಯ (Pension Benefit) ನೀಡಲಾಗುತ್ತಿತ್ತು. ಈ ಯೋಜನೆಯ ಸೌಲಭ್ಯವು ಕೇವಲ ಕುಟುಂಬದ ಮೂಲಭೂತ ಅಗತ್ಯಗಳನ್ನು ಮಾತ್ರ ಪೂರೈಸಲು ಸಾಕಾಗುತ್ತಿತ್ತು.
ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸಲು ಅನೇಕ ಕುಟುಂಬಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕನಸಿನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ.
ಹೊಸ ಯೋಜನೆಯ ಮುಖ್ಯ ಉದ್ದೇಶ
ಈ ಸಮಸ್ಯೆಯನ್ನು ಗಮನಿಸಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಈ ಯೋಜನೆಯ ಮುಖ್ಯ ಉದ್ದೇಶಗಳು:
-
ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ರಕ್ಷಿಸುವುದು
-
ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುವುದು
-
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ನೀಡುವುದು
-
ಬಡತನದಿಂದ ಶಿಕ್ಷಣ ಮಧ್ಯದಲ್ಲಿ ನಿಲ್ಲದಂತೆ ನೋಡಿಕೊಳ್ಳುವುದು
ಈ ಯೋಜನೆಯ ಮೂಲಕ ಕಾರ್ಮಿಕರ ಮಕ್ಕಳಿಗೆ Post Graduation ವರೆಗೆ ಶಿಕ್ಷಣ ಮುಂದುವರಿಸಲು ನೆರವು ದೊರೆಯಲಿದೆ.
ಇದನ್ನು ಓದಿ : SSP Scholarship 2026: ಕರ್ನಾಟಕ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ – ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 15ರವರೆಗೆ ವಿಸ್ತರಣೆ
ಯೋಜನೆಯಡಿ ದೊರೆಯುವ ಸೌಲಭ್ಯಗಳು
ಈ ಯೋಜನೆಯಡಿ ಹಲವಾರು ರೀತಿಯ ಕಾರ್ಮಿಕರ ಕುಟುಂಬಗಳಿಗೆ ನೆರವಾಗುವಂತೆ ಮಹತ್ವದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಈ ಕೆಳಗಿನಂತಿವೆ.
-
ಮೃತ ಕಾರ್ಮಿಕರ ಗರಿಷ್ಠ ಇಬ್ಬರು ಮಕ್ಕಳಿಗೆ ಸಹಾಯಧನ
-
ಸ್ನಾತಕೋತ್ತರ ಪದವಿ (Post Graduation) ವರೆಗೆ ಶಿಕ್ಷಣ ಸಹಾಯಧನ
-
ಸರ್ಕಾರದಿಂದ ನೇರ ಆರ್ಥಿಕ ನೆರವು
ಈ ಯೋಜನೆ ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣದ ದಾರಿಯನ್ನು ತೆರೆಯಲಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಯಡಿ ಕೆಲವು ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಹತೆಗಳು
-
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳು ಆಗಿರಬೇಕು.
-
ಕಾರ್ಮಿಕರು ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟಿರಬೇಕು.
-
ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ.
-
ವಿದ್ಯಾರ್ಥಿಗಳು 2025-26ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ವಿದ್ಯಾರ್ಥಿಗಳು ಅಥವಾ ಅರ್ಜಿ ಸಲ್ಲಿಸುವ ವಿಧ್ಯಾರ್ಥಿಗಳು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದುದಾಗಿದೆ.
ವಿಧಾನ :
-
ಸೇವಾ ಸಿಂಧು ಪೋರ್ಟಲ್ಗೆ ಭೇಟಿ :
ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ಪೋರ್ಟಲ್ Seva Sindhu Portal ಗೆ ಭೇಟಿ ನೀಡಬೇಕು.
-
ಖಾತೆ ರಚನೆ
ಪೋರ್ಟಲ್ನಲ್ಲಿ ಹೊಸ ಬಳಕೆದಾರರಾಗಿದ್ದರೆ ಮೊಬೈಲ್ ಸಂಖ್ಯೆ ಬಳಸಿ OTP ಮೂಲಕ ಖಾತೆ ರಚಿಸಬೇಕು.
-
ಅರ್ಜಿ ಫಾರ್ಮ್ ಭರ್ತಿ
ಖಾತೆ ಲಾಗಿನ್ ಮಾಡಿದ ನಂತರ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಮಾಹಿತಿ , ಶಿಕ್ಷಣ ವಿವರಗಳು, ವಿಳಾಸ ಇತ್ಯಾದಿಗಳನ್ನು ನಮೂದಿಸಬೇಕು.
-
ದಾಖಲೆ ಅಪ್ಲೋಡ್
ಈ ಹಂತದಲ್ಲಿ ಅಗತ್ಯ ದಾಖಲೆಗಳನ್ನು ಅಂದರೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಹಾಗೂ ಶಾಲಾ ವಿವರ ಹಾಗೂ ಆದಾರ್ ವಿವರ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
-
ಸಲ್ಲಿಕೆಅರ್ಜಿ
ಎಲ್ಲಾ ವಿವರಗಳನ್ನು ಪರಿಶೀಲಿಸಿ ಅಪ್ಲೋಡ್ ಮಾಡಿದ ನಂತರ ಅರ್ಜಿಯನ್ನು ಸಲ್ಲಿಸಬಹುದು.
ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಕೆ
ಆನ್ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಅಥವಾ ಕಾರ್ಮಿಕ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಕೆಲವು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕು.
ಅಗತ್ಯ ದಾಖಲೆಗಳು
-
ಕಾರ್ಮಿಕರ Labour Card
-
ಮರಣ ಪ್ರಮಾಣ ಪತ್ರ
-
ಅಪಘಾತದ ಬಗ್ಗೆ ಪೊಲೀಸ್ ವರದಿ ಅಥವಾ ಅಧಿಕೃತ ದಾಖಲೆ
-
ವಿದ್ಯಾರ್ಥಿಯ ಆಧಾರ್ ಕಾರ್ಡ್
-
ಇತ್ತೀಚಿನ ಪಾಸ್ಪೋರ್ಟ್ ಸೈಸ್ ಫೋಟೋ
-
Study Certificate (ವಿದ್ಯಾಸಂಸ್ಥೆಯಿಂದ)
-
ಹಿಂದಿನ ತರಗತಿಯ ಅಂಕಪಟ್ಟಿಗಳು
-
ವಿದ್ಯಾರ್ಥಿಯ ಹೆಸರಿನ ಬ್ಯಾಂಕ್ ಪಾಸ್ ಬುಕ್
ಯೋಜನೆಯ ಮಹತ್ವ
ಈ ಯೋಜನೆ ಕಾರ್ಮಿಕರ ಕುಟುಂಬಗಳಿಗೆ ಬಹಳ ದೊಡ್ಡ ನೆರವಾಗಿದೆ.ಹೆಚ್ಚಾಗಿ ಕಟ್ಟಡ ಕಾರ್ಮಿಕರು ದಿನಗೂಲಿ ಕೆಲಸ ಮಾಡುವವರಾಗಿರುವುದರಿಂದ ಅವರ ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ಕೊರತೆ ಉಂಟಾಗುತ್ತದೆ.
ಈ ಯೋಜನೆಯ ಮೂಲಕ ಕಾರ್ಮಿಕರ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.ಅದರ ಜೊತೆಗೆ ಅವರು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬಹುದು.
ಇದನ್ನು ಓದಿ : Gram One : ಗ್ರಾಮೀಣ ಯುವಕರಿಗೆ ದೊಡ್ಡ ಅವಕಾಶ – ಸಂಪೂರ್ಣ ಮಾಹಿತಿ !
ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
ಈ ಯೋಜನೆಯ ಮೂಲಕ ಕಾರ್ಮಿಕರ ಮಕ್ಕಳಿಗೆ
-
ಉನ್ನತ ಶಿಕ್ಷಣದ ಅವಕಾಶ
-
ಆರ್ಥಿಕ ಭದ್ರತೆ
-
ಉತ್ತಮ ಭವಿಷ್ಯ
ಲಭ್ಯವಾಗಲಿದೆ.
ಮುಖ್ಯಾಂಶಗಳು
• ಮೃತ ಕಾರ್ಮಿಕರ ಮಕ್ಕಳಿಗೆ Post Graduation ವರೆಗೆ ಶಿಕ್ಷಣ ಸಹಾಯಧನ
• ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಸೌಲಭ್ಯ
• 2025-26ರಿಂದ ಯೋಜನೆ ಜಾರಿ
• ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ
• ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಕೆ ಸಾಧ್ಯ
ಈ ಒಂದು ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸ ಬಹುದು
| Seva Sindhu |