ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಪ್ರಕರಣ: ಸಿಬಿಎಸ್‌ಇ ವಿದ್ಯಾರ್ಥಿಗೆ 2 ವರ್ಷ ಡಿಬಾರ್ – ಹೈಕೋರ್ಟ್ ತೀರ್ಪು

ಬೆಂಗಳೂರು: ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಯೊಬ್ಬನಿಗೆ ವಿಧಿಸಿದ್ದ ಎರಡು ವರ್ಷದ ಡಿಬಾರ್ ಆದೇಶದ ಬಗ್ಗೆ ಮಹತ್ವದ ಬೆಳವಣಿಗೆ ನಡೆದಿದೆ.

ಈ ಪ್ರಕರಣದ ಕುರಿತು ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಹಿಂದೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ರದ್ದುಪಡಿಸಿ ಸಿಬಿಎಸ್‌ಇ ವಿದ್ಯಾರ್ಥಿಗೆ 2 ವರ್ಷ ಡಿಬಾರ್ ಮಾಡುವ ಹೊಸ ಆದೇಶ ಹೊರಡಿಸಿದೆ.

ಈ ಪ್ರಕರಣವು  ವಿದ್ಯಾರ್ಥಿಗಳ ಪರೀಕ್ಷಾ ನಿಯಮಗಳು, ಪರೀಕ್ಷಾ ಶಿಸ್ತು ಹಾಗೂ ಶಿಕ್ಷಣ ವ್ಯವಸ್ಥೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.


ಪ್ರಕರಣದ ಹಿನ್ನೆಲೆ

ಈ ಘಟನೆ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ನಡೆಯುವ ವೇಳೆ ನಡೆದಿದೆ.

2024–25 ಶೈಕ್ಷಣಿಕ ಸಾಲಿನ ಸಿಬಿಎಸ್‌ಇ 12ನೇ ತರಗತಿಯ ಪರೀಕ್ಷೆಗಳು 2025ರ ಫೆಬ್ರವರಿ 17 ರಿಂದ ಮಾರ್ಚ್ 3ರವರೆಗೆ ನಡೆದಿದ್ದವು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬನ ಬಳಿ ಮೊಬೈಲ್ ಫೋನ್ ಇದ್ದುದು ಪತ್ತೆಯಾಯಿತು.

ಪರೀಕ್ಷಾ ದಿನದ ಘಟನೆ

ಪರೀಕ್ಷೆಯ ಮೊದಲ ದಿನ ವಿದ್ಯಾರ್ಥಿ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾನೆ. ವಿದ್ಯಾರ್ಥಿಯ ಪ್ರಕಾರ, ತನ್ನ ಮನೆ ಮತ್ತು ಪರೀಕ್ಷಾ ಕೇಂದ್ರದ ನಡುವೆ ಸುಮಾರು 23 ಕಿಲೋಮೀಟರ್ ದೂರ ಇದ್ದುದರಿಂದ ವಿಳಂಬವಾಗಿದೆ ಎಂದು ಕಾರಣ ನೀಡಿದ್ದಾನೆ.

ಪರೀಕ್ಷೆ ಪ್ರಾರಂಭವಾದ ನಂತರ ಸುಮಾರು 25 ನಿಮಿಷಗಳ ಬಳಿಕ ಪರೀಕ್ಷಾ ನಿರೀಕ್ಷಕರು ವಿದ್ಯಾರ್ಥಿಯ ಜೇಬಿನಲ್ಲಿ ಮೊಬೈಲ್ ಫೋನ್ ಇರುವುದನ್ನು ಗಮನಿಸಿದ್ದಾರೆ.

ತಕ್ಷಣವೇ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಯಿತು ಮತ್ತು ವಿದ್ಯಾರ್ಥಿಗೆ ಬೇರೆ ಪ್ರಶ್ನೆಪತ್ರಿಕೆ ನೀಡಲಾಗಿದ್ದು, ಪರೀಕ್ಷೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ.

ಆದರೆ ಈ ಘಟನೆ ಬಳಿಕ ಸಿಬಿಎಸ್‌ಇ ನಿಯಮಾನುಸಾರ ಕ್ರಮ ಕೈಗೊಳ್ಳಲಾಯಿತು.

ಇದನ್ನು ಓದಿ : Education Assistance : ಕಾರ್ಮಿಕರ ಮಕ್ಕಳಿಗೆ ದೊಡ್ಡ ಸಿಹಿ ಸುದ್ದಿ- Post Graduation ವರೆಗೆ ಶಿಕ್ಷಣ ಸಹಾಯಧನ !


ಸಿಬಿಎಸ್‌ಇ ಕೈಗೊಂಡ ಕ್ರಮ

ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂಬ ಆರೋಪದಡಿ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಣ ಕೇಂದ್ರ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಂಡಿತು.

ಸಿಬಿಎಸ್‌ಇ ನಿಯಮಗಳ ಪ್ರಕಾರ ಪರೀಕ್ಷಾ ಕೊಠಡಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದು ಅನುಚಿತ ಸಾಧನ ಬಳಕೆ (UFM – Unfair Means) ಎಂದು ಪರಿಗಣಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ:

  • ವಿದ್ಯಾರ್ಥಿಯನ್ನು ಆ ವರ್ಷದ ಪರೀಕ್ಷೆಯಿಂದ

  • ಜೊತೆಗೆ ಮುಂದಿನ ಒಂದು ವರ್ಷದ ಪರೀಕ್ಷೆಯಿಂದ

ಒಟ್ಟು ಎರಡು ವರ್ಷಗಳ ಕಾಲ ಡಿಬಾರ್ ಮಾಡುವ ಆದೇಶ ನೀಡಲಾಗಿತ್ತು.


ವಿದ್ಯಾರ್ಥಿ ಹೈಕೋರ್ಟ್ ಮೊರೆ

ಸಿಬಿಎಸ್‌ಇ ನೀಡಿದ ಡಿಬಾರ್ ಆದೇಶವನ್ನು ವಿದ್ಯಾರ್ಥಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದನು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತ್ತು.

ನ್ಯಾಯಪೀಠದ ಪ್ರಕಾರ:

  • ವಿದ್ಯಾರ್ಥಿಯ ಮೊಬೈಲ್‌ನಲ್ಲಿ ಯಾವುದೇ ನಕಲು ಸಾಮಗ್ರಿ ಇರಲಿಲ್ಲ

  • ಮೊಬೈಲ್‌ನಿಂದ ಯಾವುದೇ ನಕಲು ಮಾಡಿರುವುದು ಸಾಬೀತಾಗಿಲ್ಲ

  • ಪರೀಕ್ಷಾ ನಿಯಮ ಉಲ್ಲಂಘನೆ ಆಗಿದ್ದರೂ ದುರುದ್ದೇಶ ಸಾಬೀತಾಗಿಲ್ಲ

ಈ ಕಾರಣಗಳಿಂದ ಸಿಬಿಎಸ್‌ಇ ಡಿಬಾರ್ ಆದೇಶ ಅನ್ಯಾಯಕರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.


ಏಕಸದಸ್ಯ ನ್ಯಾಯಪೀಠದ ಆದೇಶ

ವಿಚಾರಣೆ ಬಳಿಕ ಏಕಸದಸ್ಯ ನ್ಯಾಯಪೀಠ ಮಹತ್ವದ ನಿರ್ಧಾರವನ್ನು ಕೈಗೊಂಡಿತು.ವಿಧ್ಯಾರ್ಥಿಯ ಪರವಾಗಿ ತೀರ್ಪು ನೀಡಿತ್ತು.

ತೀರ್ಪು :

  • ಸಿಬಿಎಸ್‌ಇ ನೀಡಿದ್ದ ಡಿಬಾರ್ ಆದೇಶವನ್ನು ರದ್ದುಪಡಿಸಲಾಗಿತ್ತು

  • ವಿದ್ಯಾರ್ಥಿಗೆ ಸಂದೇಹದ ಲಾಭ ನೀಡಲಾಗಿತ್ತು

ಈ ತೀರ್ಪು ಶಿಕ್ಷಣ ವಲಯದಲ್ಲಿ ಭಾರಿ ಗಮನವನ್ನೆ ಸೆಳೆದಿದೆ. ಸಿಬಿಎಸ್‌ಇ ಕೂಡ ಈ ತೀರ್ಪಿಂದ ತಲೆಕಡಿಸಿಕೊಂಡಿತ್ತು.


ಸಿಬಿಎಸ್‌ಇ ಮೇಲ್ಮನವಿ

ಆದರೆ ಈ ಆದೇಶವನ್ನು ಸಿಬಿಎಸ್‌ಇ ಒಪ್ಪಿಕೊಳ್ಳಲಿಲ್ಲ. ಅದರಿಂದ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು.

ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿತು.

ವಿಭಾಗೀಯ ನ್ಯಾಯಪೀಠದ ತೀರ್ಪು

 ಅದರಂತೆಯೇ ವಿಭಾಗೀಯ ನ್ಯಾಯಪೀಠವು  ತನ್ನ ತೀರ್ಪಿನಲ್ಲಿ ಈ ಹಿಂದೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.

ನ್ಯಾಯಪೀಠದ ಅಭಿಪ್ರಾಯ:

  • ಪರೀಕ್ಷಾ ನಿಯಮಗಳು ಸ್ಪಷ್ಟವಾಗಿವೆ

  • ಮೊಬೈಲ್ ಫೋನ್ ಪರೀಕ್ಷಾ ಕೊಠಡಿಗೆ ತರಲು ಅವಕಾಶ ಇಲ್ಲ

  • ನಿಯಮ ಉಲ್ಲಂಘನೆ ನಡೆದಿರುವುದು ಸತ್ಯ

ಹೀಗಾಗಿ ಸಿಬಿಎಸ್‌ಇ ಕೈಗೊಂಡ ಕ್ರಮ ಪರೀಕ್ಷಾ ನಿಯಮಗಳಿಗೆ ಅನುಗುಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನು ಓದಿ : SSP Scholarship 2026: ಕರ್ನಾಟಕ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ – ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 15ರವರೆಗೆ ವಿಸ್ತರಣೆ


ವಿದ್ಯಾರ್ಥಿಯ ಸಾಧನೆ

ಇಷ್ಟೆಲ್ಲ ಆದರೂ ಈ ಪ್ರಕರಣದಲ್ಲಿ ಗಮನ ಸೆಳೆದ ವಿಷಯವೆಂದರೆ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಉತ್ತಮವಾಗಿರುವುದು.

ವಿದ್ಯಾರ್ಥಿ ಶೈಕ್ಷಣಿಕ ಸಾಧನೆ

  • 10ನೇ ತರಗತಿಯಲ್ಲಿ 92% ಅಂಕ ಪಡೆದಿದ್ದಾನೆ

  • 2025ರಲ್ಲಿ JEE Advanced ಪರೀಕ್ಷೆಯಲ್ಲೂ ಯಶಸ್ವಿಯಾಗಿದ್ದಾನೆ

ಈ ಕಾರಣದಿಂಲೇ ಪ್ರಕರಣವು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಯಿತು.


ಪರೀಕ್ಷಾ ನಿಯಮಗಳ ಮಹತ್ವ

ಈ ಘಟನೆ ಪರೀಕ್ಷಾ ಶಿಸ್ತು ಮತ್ತು ನಿಯಮಗಳ ಮಹತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ:

  • ಮೊಬೈಲ್ ಫೋನ್

  • ಸ್ಮಾರ್ಟ್ ವಾಚ್

  • ಬ್ಲೂಟೂತ್ ಸಾಧನಗಳು

  • ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು

ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ವಿದ್ಯಾರ್ಥಿಗಳ ಗಮನಕ್ಕೆ

ಈ ಪ್ರಕರಣವು ವಿದ್ಯಾರ್ಥಿಗಳಿಗೆ ಪ್ರಮುಖ ಪಾಠವಾಗಿದೆ. ಪರೀಕ್ಷೆಗೆ ಹೋಗುವಾಗ ವಿದ್ಯಾರ್ಥಿಗಳು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು .ಪರೀಕ್ಷಾ ಕೇಂದ್ರದ ಸೂಚನೆಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.


ಶಿಕ್ಷಣ ವಲಯದಲ್ಲಿ ಭಾರಿ ಚರ್ಚೆ

ಈ ಪ್ರಕರಣವು ಶಿಕ್ಷಣ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.ಕೆಲವರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳುತ್ತಾರೆ. ವಿಧ್ಯಾರ್ಥಿಯ ವಿಷಯದಲ್ಲಿ ತೀರ್ಪು ಸರಿಯಿದೆ ಎಂದು ಹೇಳುತ್ತಿದ್ದಾರೆ.

ಮತ್ತು ಕೆಲವರು ವಿದ್ಯಾರ್ಥಿಯ ಉದ್ದೇಶವನ್ನು ಗಮನಿಸಬೇಕು. ವಿಧ್ಯಾರ್ಥಿಯು ಒಬ್ಬ ನಿಪುಣ ಹಾಗೂ ಉತ್ತಮ ವಿದ್ಯಾರ್ಥಿಯಾಗಿದ್ದು, ಈ ಘಟನೆ ಕೇವಲ ಆಕಸ್ಮಿಕವಾಗಿ ನಡೆದಿರ ಬಹುದು , ಅಷ್ಟಕ್ಕೆ ಇಷ್ಟು ಕಠಿಣ ತೀರ್ಪು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.

 ‌ಎಚ್ಚರಿಕೆ: ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಫೋನ್ ಪ್ರಕರಣದ ಕುರಿತು ನಡೆದ ಈ ನ್ಯಾಯಾಂಗ ಹೋರಾಟವು ಶಿಕ್ಷಣ ವ್ಯವಸ್ಥೆಯಲ್ಲಿನ ನಿಯಮಗಳು ಮತ್ತು ವಿದ್ಯಾರ್ಥಿಗಳ ಹಕ್ಕುಗಳ ನಡುವಿನ ಸಮತೋಲನದ ಬಗ್ಗೆ ಚರ್ಚೆ ಮೂಡಿಸಿದೆ.

ಈ ಘಟನೆ ಮುಂದಿನ ದಿನಗಳಲ್ಲಿ ಪರೀಕ್ಷಾ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಲು ಕಾರಣವಾಗುವ ಸಾಧ್ಯತೆಯಿದೆ.